ಮಂಗಳೂರು, ಫೆ 7(MSP): ನಗರದಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದ ಮೂಲಕ ದುಬೈಗೆ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಫೆ 7 ರಂದು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ್ ಹಮೀದ್ ಕೋಡಿಯಮ್ಮ ಎಂದು ಗುರುತಿಸಲಾಗಿದೆ. ಈತ ದುಬೈಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ವೇಳೆ ತಪಾಸಣೆ ಸಂದರ್ಭ ಅಬ್ದುಲ್ ಧರಿಸಿದ್ದ ವಸ್ತ್ರದಲ್ಲಿ ಸಂಶಯಾತ್ಮಕ ವಸ್ತು ಕಂಡು ಬಂತು. ತಕ್ಷಣ ಹೆಚ್ಚಿನ ತಪಾಸಣೆಗಾಗಿ ಅಧಿಕಾರಿಗಳು ಕೊಠಡಿಗೆ ಕರೆದೊಯ್ದ ಸಂದರ್ಭದಲ್ಲಿ ಆತನ ಒಳ ಉಡುಪಿನಲ್ಲಿ 5000 ಡಾಲರ್ ಮೌಲ್ಯದ 2 ಬಂಡಲ್ ಯುಎಸ್ಎ ಡಾಲರ್ ಪತ್ತೆಯಾಗಿದೆ. ಇದಲ್ಲದೇ ಈತನ ಬಳಿ ಇದ್ದ 7 ಲ.ರೂ. ಮೌಲ್ಯದ (10,000 ಯುಎಸ್ಎ ಡಾಲರ್ ) ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ