ಮಂಗಳೂರು ಅ27: ತಮಿಳು ನಟ ವಿಜಯ್ ಕೇಂದ್ರ ಕಥಾಪಾತ್ರವಾಗಿ ಅಭಿನಯಿಸಿದ ’ಮೆರ್ಸಲ್ ’ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಹಿಂಪಡೆಯಬೇಕೆಂದು ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಉಚ್ಛನ್ಯಾಯಾಲಯ ತಿರಸ್ಕರಿಸಿದೆ. ’ಅದೊಂದು ಸಿನೆಮಾ ಮಾತ್ರ. ಅದಲ್ಲದೆ ಅದನ್ನು ನೈಜ ಘಟನೆ ಎಂದು ಬಿಂಬಿಸಲು ಸಾಧ್ಯವಿಲ್ಲ.’ ಎಂದು ಎ.ಅಶ್ವಥ್ಥಮನ್ ಎಂಬವರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಚಿತ್ರದಲ್ಲಿ ಭಾರತದ ಕುರಿತು ಹಾಗೂ ಕೇಂದ್ರ ಸರ್ಕಾರ ಜ್ಯಾರಿಗೊಳಿಸಿದ ಜಿಎಸ್ ಟಿ ತೆರಿಗೆಯನ್ನು ತಪ್ಪಾಗಿ ವಿವರಿಸಲಾಗಿದೆ ಎಂದು ಅರೋಪಿಸಿ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದರು.
ಜಿಎಸ್ ಟಿ ಬಗ್ಗೆ ನಾಯಕ ನಟನು ಆಡಿದ ಡೈಲೋಗಿನಿಂದಾಗಿ ಚಿತ್ರದ ಮೊದಲ ದಿನವೇ ಈ ಬಗ್ಗೆ ವಿವಾದ ಹುಟ್ಟಿಕೊಂಡಿತ್ತು. ಮೆರ್ಸಲಿನಲ್ಲಿ ಕೇಂದ್ರ ಸರ್ಕಾರದ ಆವಿಷ್ಕಾರಗಳನ್ನು ವ್ಯಂಗ್ಯವಾಡುವ ಮಾತುಕತೆ್ಯನ್ನು ಅಳವಡಿಸಲಾಗಿದೆ ಎಂದು ಬಿಜೆಪಿ ತಮಿಳು ನಾಡು ಘಟಕದ ಅಧ್ಯಕ್ಷರಾದ ತಮಿಳಿಸೈ ಸೌಂದರಾಜ ಚಿತ್ರ ಪ್ರದರ್ಶಣದ ಆರಂಭದ ದಿನಗಳಲ್ಲಿ ಅರೋಪಿಸಿದ್ದರು. ನಂತರ ಬಿಜೆಪಿ ರಾಶ್ಟ್ರೀಯ ಕಾರ್ಯಕಾರಣಿ ಕಾರ್ಯದರ್ಶಿಯವರಾದ ಎಚ್.ರಾಜಾ, ವಿಜಯ್ ಓರ್ವ ಕ್ರೈಸ್ತ ಎಂದು ಹೇಳಿಕೆ ನೀಡಿದ್ದರಿಂದ ೈದು ರಾಶ್ಟ್ರ ಮಟ್ಟದ ವಿವಾದವಾಗಿ ಮಾರ್ಪಟ್ಟಿತ್ತು.