ಸುಬ್ರಮಣ್ಯ, ಫೆ 07(SM): ಸುಬ್ರಮಣ್ಯ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಗುಡುಗು ಸಹಿತ ಭಾರಿ ಗಾಳಿ ಮಳೆ ಸುರಿದಿದೆ. ಪರಿಣಾಮ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಸುಳ್ಯ ತಾಲೂಕಿನ ಹರಿಹರ ನಿವಾಸಿ ಪ್ರವೀಣ್ (21) ಮೃತ ಯುವಕ.
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಖಾಸಗಿ ವಸತಿ ಗೃಹದ ಬಳಿ ಘಟನೆ ನಡೆದಿದೆ. ವಸತಿ ಗೃಹದಲ್ಲಿ ಕೆಲಸಕ್ಕೆಂದು ಪ್ರವೀಣ್ ತೆರಳಿದ್ದರು. ಇಂದು ಪರಿಸರದಲ್ಲಿ ಏಕಾಏಕಿ ಸುರಿದ ಗುಡುಗು ಮಳೆಯ ಸಂದರ್ಭ ವಸತಿ ಗೃಹದ ಮೇಲೆ ಸಿಡಿಲು ಬಡಿದಿದೆ. ಪರಿಣಾಮ ಪ್ರವೀಣ್ ದಾರುಣವಾಗಿ ಮೃತಪಟ್ಟಿದ್ದಾರೆ.
ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.