ಕಾಪು, ಫೆ 08(SM): ಯುವತಿ ಒಂಟಿಯಾಗಿ ನಡೆದಾಡುತ್ತಿರೋ ವೇಳೆ ಆಕೆಯ ತಂಟೆಗೆ ಹೋಗೋ ಯೋಚನೆ ಮಾಡುವ ಯುವಕರಿಗೆ ಇಲ್ಲಿದೆ ಎಚ್ಚರಿಕೆ. ಯುವತಿಯೊಬ್ಬಳ ತಂಟೆಗೆ ತೆರಳಿದ ಕಾಮುಕನೊಬ್ಬನಿಗೆ ಯುವತಿ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ಕಾಪುವಿನಲ್ಲಿ ನಡೆದಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಗೆ ಪ್ರತಿನಿತ್ಯ ಚುಡಾಯಿಸುತ್ತಿದ್ದ. ಯುವಕನ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಒಂದೆರಡು ಬಾರಿ ಯುವತಿ ಎಚ್ಚರಿಕೆಯನ್ನು ಕೂಡ ನೀಡಿದ್ದಳು. ಆದರೂ ಸುಮ್ಮನಿರದ ಆತ ತನ್ನ ಕಾರ್ಯ ಮುಂದುವರೆಸಿದ್ದಾನೆ.
ಇದರಿಂದ ಕೋಪಗೊಂಡಿದ್ದ ಯುವತಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಳು. ಅದರಂತೆ ಫೆಬ್ರವರಿ 7ರ ಸಂಜೆ ಮನೆಗೆ ತೆರಳುತ್ತಿದ್ದ ವೇಳೆ ತನ್ನ ತಂಟೆಗೆ ಬಂದ ಬೀದಿ ಕಾಮುಕನಿಗೆ ನಡುರಸ್ತೆಯಲ್ಲೇ ಅಡ್ಡಗಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಇದೀಗ ಯುವಕನಿಗೆ ಧರ್ಮದೇಟು ನೀಡಿದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.