ಮಂಗಳೂರು, ಫೆ 09(SM): ರಾಜ್ಯದ ಸಮ್ಮಿಶ್ರ ಸರ್ಕಾರದ 2ನೇ ಬಜೆಟ್ ಮಂಡನೆ ಮುನ್ನ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ವಿರುದ್ಧ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದ ಸಿಡಿ ರಾಜಕೀಯ ಸಂಚಲನವನ್ನು ಉಂಟುಮಾಡಿದೆ.
ಈ ಬಗ್ಗೆ ಇಂದು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಿನ್ನೆ ಆಪರೇಷನ್ ಕಮಲದ ಬಗ್ಗೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ಯಡಿಯೂರಪ್ಪ ಅವರದು ಅಲ್ಲ ಎಂದು ಸ್ಪೀಕರ್ ನೀಡಿದ್ದಾರೆ. ಹಾಗಂತ ಆಡಿಯೋದಲ್ಲಿರುವ ಸ್ವರ ಯಡಿಯೂರಪ್ಪ ಅವರದೆಂದು ನಾನು ಹೇಳಿಲ್ಲ ಎಂದು ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಯಬೇಕು. ಆಡಿಯೋದಲ್ಲಿ ಸ್ಪೀಕರ್, ಅಮಿತ್ ಶಾ, ಪ್ರಧಾನಮಂತ್ರಿಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಮಾತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಆಡಿಯೋ ಬಗ್ಗೆ ಪ್ರಧಾನಮಂತ್ರಿಗಳು ತನಿಖೆಗೆ ತೀರ್ಮಾನಿಸಿ ಸಹಕಾರ ಕೊಟ್ಟರೆ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಇದನ್ನು ಮಿಮಿಕ್ರಿ ಸರ್ ಎಂದಿದ್ದಾರೆ ಅದರ ಸತ್ಯಾಸತ್ಯತೆ ಹೊರ ಬರಬೇಕು ಈ ನಿಟ್ಟಿನಲ್ಲಿ ತನಿಖೆ ಮಾಡಬೇಕು ಎಂದರು. ಎಸಿಬಿ ತನಿಖೆ ಬಗ್ಗೆಯೂ ಮುಂದೆ ನೋಡೋಣ ಎಂದು ಅವರು ತಿಳಿಸಿದ್ದಾರೆ.