ಮಂಗಳೂರು, ಫೆ 09(SM): ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಉರ್ವ ಠಾಣಾ ಪೊಲೀಸರು ಯುವತಿಯನ್ನು ರಕ್ಷಿಸಿ ಯುವಕನನ್ನು ಬಂಧಿಸಿರುವ ಘಟನೆ ನಡೆದಿದೆ.
ಅಶೋಕನಗರದ ಮಂಜೆಶ ಆರ್ಕೇಡ್ ಕಟ್ಟಡದ 2 ನೇ ಅಂತಸ್ತಿನ ಕೊಠಡಿಯಲ್ಲಿ ಸ್ಪರ್ಶ್ ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಮಸಾಜ್ ಪಾರ್ಲರ್ ನಲ್ಲಿ ಯುವತಿಯರನ್ನು ಗ್ರಾಹಕರಿಗೆ ಒದಗಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇದರಂತೆ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೂ ವೇಶ್ಯಾವಾಟಿಕೆಗೆ ಯುವತಿಯರನ್ನು ಒದಗಿಸುತ್ತಿದ್ದ ದಲ್ಲಾಳಿ ಸುಶೀಲ ಎಂಬಾಕೆಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ದಾಳಿ ಸಂದರ್ಭದಲ್ಲಿ ಪಿಂಪ್ ಸುಶೀಲ ತಲೆಮರೆಸಿಕೊಂಡಿದ್ದಾಳೆ. ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಉರ್ವ ಠಾಣೆಯ ಇನ್ಸ್ ಪೆಕ್ಟರ್ ಕೆ.ಎಂ. ಶರೀಫ್ ಸಿಸಿಬಿ ಘಟಕದ ಪಿಎಸ್ಐ ಕಬ್ಬಳರಾಜ್ ಮತ್ತು ಸಿಬ್ಬಂದಿಗಳು ಮತ್ತು ಉರ್ವ ಠಾಣಾ ಸಿಬ್ಬಂದಿಗಳು ಭಾಗವಹಿಸಿದ್ದರು.