ಮಂಗಳೂರು, ಫೆ 09(SM): ಧರ್ಮಸ್ಥಳದಲ್ಲಿ ನವದಿನಗಳ ಕಾಲ ನಡೆಯುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರದಂದು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಮುಖ್ಯಮಂತ್ರಿ, ಕನ್ನಡ ಸಂಸ್ಕೃತಿ ಮತ್ತು ಜೈನಧರ್ಮದ ಸಂಬಂಧ ಹಾಲು ಜೇನಿನಂತಹುದು. ಕನ್ನಡದ ಶಿಲ್ಪಕಲೆ, ಸಮಾಜ ಜೀವನ ಮತ್ತು ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ ಜೈನ ಸಾಧಕರ ಪರಂಪರೆಯೇ ಕನ್ನಡ ಸಂಸ್ಕೃತಿಯ ಭಾಗವಾಗಿದೆ ಎಂದು ಸಿಎಂ ಬಣ್ಣಿಸಿದರು.
ಇನ್ನು ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಧರ್ಮಸ್ಥಳ ಕ್ಷೇತ್ರದ ಡಾ. ಡಿ. ವಿರೇಂದ್ರ ಹೆಗ್ಗಡೆ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮುಖ್ಯಮಂತ್ರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ಕ್ಷೇತ್ರದ ವಠಾರದಲ್ಲಿ ಫೆಬ್ರವರಿ 18ರ ತನಕ ನಿರಂತರ ವಿವಿಧ ಧಾರ್ಮಿಕ, ಸಾಸ್ಕೃತಿಕ, ಕಲಾ ಪ್ರಕಾರದ ಕಾರ್ಯಕ್ರಮಗಳು ನಡೆಯಲಿವೆ.