ಉಳ್ಳಾಲ, ಫೆ 10 (MSP): ಭಿನ್ನ ಜಾತಿ ಯುವತಿಯೊಂದಿಗೆ ಯುವಕತ ತಂಡವೊಂದು ಹುಕ್ಕಾ ಬಾರ್ನಲ್ಲಿ ಹುಕ್ಕಾ ಸೇದುವುದಕ್ಕೆ ಬಂದವರ ವಿರುದ್ಧ ಹಿಂದೂ ಕಾರ್ಯಕರ್ತರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ಉಳ್ಳಾಲ ಪೊಲೀಸರು ಎಲ್ಲರನ್ನು ಹೊರಗೆ ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದ ಘಟನೆ ಕುತ್ತಾರು ಮದನಿ ನಗರದಲ್ಲಿ ನಡೆದಿದೆ.
ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಹಿಂದೂ ಯುವತಿ ಹಾಗೂ ಮೂವರು ಮುಸ್ಲಿಂ ಯುವಕರು ಹುಕ್ಕಾ ಸೇದಲು ಶನಿವಾರ ಮಧ್ಯಾಹ್ನ ವೇಳೆ ಬಂದಿದ್ದರು. ಈ ಮಾಹಿತಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೂಲಕ ಪೊಲೀಸರಿಗೆ ಸಿಕ್ಕಿತ್ತು. ಕೂಡಲೇ ಉಳ್ಳಾಲ ಪೊಲೀಸರು ಹೊಟೇಲ್ಗೆ ಆಗಮಿಸಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿ ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸ್ಥಳದಲ್ಲಿ ಸಂಘಟನೆಗಳ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಹುಕ್ಕಾ ಸೇವನೆ ನಿಲ್ಲಿಸುವಂತೆ ಪೊಲೀಸರು ಈಗಾಗಲೇ ಈ ಹೊಟೇಲ್ಗೆ ಒಂದು ಬಾರಿ ನೋಟಿಸ್ ನೀಡಿದ್ದರು. ಈಗ ಮತ್ತೆ ಮಾಲಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ