ಮಂಗಳೂರು ಅ28: ನಗರದ ಬಸ್ಸುಗಳಲ್ಲಿ ಪ್ರಯಾಣಿಸುವಾಗ ನಿರ್ವಾಹಕರಿಂದ ಟಿಕೇಟು ದೊರೆಯದಿದ್ದರೆ ದುಡ್ಡು ನೀಡಬೇಡಿ ಎಂದು ಮಂಗಳೂರು ಪೋಲಿಸರು ಸಾರ್ವಜಣಿಕರಿಗೆ ಸಲಹೆ ನೀಡಿದ್ದಾರೆ. ನಿನ್ನೆ ನಡೆದ ಪೋಲಿಸ್ ಫೋನ್ ಇನ್ ಕಾರ್ಯಕ್ರಮದ ವೇಳೆ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಪೋಲಿಸ್ ಆಯುಕ್ತರು " ಕಳೆದ ಕೆಲ ತಿಂಗಳುಗಳಿಂದ ನಿರ್ವಾಹಕರು ಟಿಕೇಟು ನೀಡುತ್ತಿಲ್ಲ ಎಂಬ ದೂರುಗಳು ನಿರಂತರವಾಗಿ ಕೇಳಿಬರುತ್ತಿವೆ. ಪೋಲಿಸ್ ಹಾಗೂ ಸಾರಿಗೆ ಇಲಾಖೆ ಈ ಬಗ್ಗೆ ಸಾಕಷ್ಟು ಕ್ರಮಗಳನ್ನು ತೆಗೆದಿತ್ತಾದರೂ ಹೆಚ್ಚಿನ ಯಶಸ್ಸು ಕಂಡುಬರಲಿಲ್ಲ. ಆದುದರಿಂದ ಪ್ರಯಾಣಿಕರು ಟಿಕೇಟು ನೀಡದ ಬಸ್ಸಿನಲ್ಲಿ ದುಡ್ಡು ನೀಡದೆ ಇರುವುದೇ ಸೂಕ್ತ ಪರಿಹಾರ" ಎಂದು ಹೇಳಿದರು
"ಹಿರಿಯ ನಾಗರಿಕರಿಗೆ ಮೀಸಲಿಟ್ಟ ಸೀಟುಗಳಲ್ಲಿ ಇತರರು ಕುಳಿತುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಬಸ್ ನಿರ್ವಾಹಕರಿಗಿದೆ. ಒಂದು ವೇಳೆ ನಿರ್ವಾಹಕರ ಮಾತುಗಳನ್ನು ಆಲಿಸದಿದ್ದರೆ ತಕ್ಷಣ ಪೋಲಿಸರಿಗೆ ತಿಳಿಸಬೇಕು. ಮಾಹಿತಿ ದೊರಕಿದ ಹತ್ತು ನಿಮಿಷಗಳಲ್ಲಿ ’ಸಾಗರ್’ ಎಂಬ ಪೋಲಿಸ್ ವಾಹನ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳಳಿದೆ" ಎಂದು ವಿವರಿಸಿದರು