ಮಂಗಳೂರು, ಫೆ 10(SM): ಸಮುದ್ರ ಪಾಲಾಗುತ್ತಿದ್ದ ಯುವಕನನ್ನು ಸ್ಥಳೀಯ ಲೈಫ್ಗಾರ್ಡ್ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಪಣಂಬೂರ್ ಬೀಚ್ನಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಯುವಕ ಪುಪ್ಪರಾಜ್ ರಕ್ಷಿಸಲ್ಪಟ್ಟ ಯುವಕ.
ಪುಪ್ಪರಾಜ್ ರವಿವಾರದ ರಜೆಯ ಮಜಾ ಮಾಡಲೆಂದು ಪಣಂಬೂರ್ ಬೀಚ್ಗೆ ಬಂದಿದ್ದ. ತನ್ನ ಸ್ನೇಹಿತರ ಜತೆ ಸಮುದ್ರದಲ್ಲಿ ಈಜಲು ಮುಂದಾಗಿದ್ದ. ಈ ಸಂದರ್ಭ ಪುಪ್ಪರಾಜ್ ಸಮುದ್ರ ಪಾಲಾಗಿದ್ದಾನೆ. ತಕ್ಷಣ ಸಮಯಪ್ರಜ್ಞೆ ಮೆರೆದ ಸ್ಥಳೀಯ ಲೈಫ್ಗಾರ್ಡ್ ಸಿಬ್ಬಂದಿಗಳು ಪುಪ್ಪರಾಜ್ನನ್ನು ರಕ್ಷಣೆ ಮಾಡಿದ್ದಾರೆ.