ಕುಂದಾಪುರ,ಫೆ 11(MSP): ಬ್ಲಾಕ್ ಕಾಂಗ್ರೆಸ್ ಕೋಟ ಇವರ ಆಶ್ರಯದಲ್ಲಿ ಇತ್ತೀಚಿಗೆ ಕೋಟ ಮಣೂರು ಪರಿಸರಲ್ಲಿ ಜೋಡಿ ಕೊಲೆಗೆ ಸಂಬಂಧಿಸಿದಂತೆ ಅದರ ವಿರುದ್ಧ ಹಾಗೂ ಕೋಟ ಜಿಲ್ಲಾ ಪಂಚಾಯತ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ರಾಜೀನಾಮೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಸಭೆ ಕೋಟ ಬಸ್ಸ್ ನಿಲ್ದಾಣದಲ್ಲಿ ಜರಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮಾಜಿ ಸಚಿವ ವಿನಯ ಕುಮಾರ್ ಮಾತನಾಡಿ ಸಾಹಿತಿ ಶಿವರಾಮ ಕಾರಂತರು ಹುಟ್ಟಿದ ಈ ನಲೆದಲ್ಲಿ ಕೊಲೆಯ ಕಳಂಕ ಹಾಗೂ ತಲೆ ತಗ್ಗಿಸುವಂತ ಕೃತ್ಯ ಎಸೆಗಿದ ಜೋಡಿ ಕೊಲೆ ಇದಕ್ಕೆ ಕಾರಣಿಭೂತರಾದ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆಯನ್ನು ಹುಡುಕು ಬಂಧಿಸಿದ ಪೋಲಿಸ್ ಇಲಾಖೆಯ ವೈಖರಿ ಯನ್ನು ಶ್ಲಾಘೀಸುತ್ತೇನೆ. ಒಬ್ಬ ಜನಪ್ರತಿನಿಧಿಯಾದವನ್ನು ಹೇಗಿರಬೇಕಂಬ ಪ್ರಜ್ಞೆ ಇಲ್ಲದವನು ತಾನೊಬ್ಬ ರೌಡಿ ಎಂಬುವುದನ್ನು ಖಾತ್ರಿಪಡಿಸುತ್ತಾನೆ ಇಂಥ ಜನಪ್ರತಿನಿಧಿಗಳು ನಿಮ್ಮಗೆ ಬೇಕಾ ಆ ವ್ಯಕ್ತಿಯನ್ನು ಇದೇ ಕೂಡಲೆ ರಾಜೀನಾಮೆ ಕೊಡಿಸಿ ಶಿಸ್ತಿನ ಪಕ್ಷ ಎಂಬ ಹಣೆ ಪಟ್ಟಿಗೆ ಸೇರಿಸಲಿ ನೋಡುವ ಎಂದು ಸವಾಲ್ ಎಸೆದರು.
ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುಷ್ಕೃತ್ಯ ನಡೆದರೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ ಆದರೆ ಅದರ ರಕ್ಷಣೆಗೆ ಬಿಜೆಪಿ ನಿಲ್ಲುತ್ತಿರುವುದು ಖೇದಕರ. ಎಲ್ಲಿ ಕೊಲೆ ನಡೆದರು ಅಲ್ಲಿ ಇಲ್ಲಿನ ಸಂಸದೆ ಶೋಭಾ ಬೊಬ್ಬೆ ಹೊಡೆಯುತ್ತಾರೆ ಆದರೆ ಕೋಟದಲ್ಲಿ ನಡೆದ ಕೊಲೆಯಲ್ಲಿ ಶೋಭನ ಪಾದಸ್ಪರ್ಶವು ಇಲ್ಲದಾಗಿದೆ ಇವರೆಂಥ ಜನಪ್ರತಿನಿಧಿಗಳು ಕೊಲೆಯಲ್ಲಿ ಪಾತ್ರದಾರಿಯಾದ ಜಿಲ್ಲಾಪಂಚಾಯತ್ ಸದಸ್ಯ ಇವರ ಆಪ್ತ ಎಂಬ ದಿಸೆಯಲ್ಲಿ ಅವರಿಗೆ ರಕ್ಷಣೆ ನೀಡುತ್ತಾರೆ ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು. ಎಲ್ಲಿ ಕೊಲೆಯಾದರು ಕಾಂಗ್ರಸ್ ಮೇಲೆ ಬಣ್ಣ ಬಡಿಯುವ ಬಿಜೆಪಿ, ಕೊಕ್ಕರ್ಣೆಯಲ್ಲಿ ನಡೆದ ಪ್ರವೀಣ್ ಪೂಜಾರಿ, ಮಂಗಳೂರಿನ ವಿನಯ್ ಬಾಳಿಗ, ಹಾಗೇ ಇದೀಗ ಕೋಟ ದಲ್ಲಿ ನಡೆದ ಜೋಡಿ ಕೊಲೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲದಿರುವುದು ಅದರಲ್ಲಿ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಯಾವುದೇ ರೀತಿಯ ಉತ್ತರ ನೀಡದೆ ತಮ್ಮ ಶಿಷ್ಯನಿಗೆ ಸಾಥ್ ನೀಡಿರುವುದು ಬೇಸರದ ಸಂಗತಿಯಾಗಿದೆ. ಇದು ಇಲ್ಲಿಗೆ ಕೊನೆಗೊಳ್ಳಬೇಕಾದರೆ ಕೊಲೆಯಲ್ಲಿ ಆರೋಪಿಗಳಾದ ನೀಚರಿಗೆ ಕಠಿಣ ಶಿಕ್ಷಯಾಗಬೇಕು ಆಗ ಈ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ರವಾನೆಯಾಗುತ್ತದೆ. ಈ ಬಗ್ಗೆ ನ್ಯಾಯಯುತ ತನಿಖೆ ಹಾಗೂ ಕ್ರಮ ಕೈಗೊಂಡ ಪೋಲಿಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಹೆಗ್ಡೆ ಮಾತನಾಡಿ ಇಡೀ ದೇಶವೇ ತಲೆ ತಗ್ಗಿಸುವಂತ ಕೊಲೆ ಈ ಗ್ರಾಮೀಣ ಭಾಗವಾದ ಕೋಟದಲ್ಲಿ ಬಂದೊದಗಿದ್ದು ದುರದೃಷ್ಟಕರ ಇದಕ್ಕೆ ಬಿಜೆಪಿಯೇ ಕಾರಣ ಎಲ್ಲೆ ಕೊಲೆ ನಡೆದರು ಅಲ್ಲಿ ಧಾವಿಸಿ ಪ್ರತಿಭಟಿಸುವ ಈ ಬಿಜೆಪಿಗರು ಇಲ್ಲಿ ಯಾಕೇ ಇಲ್ಲ ಇದರ ಒಳಮರ್ಮ ಏನು ತಮ್ಮ ಜಿಲ್ಲಾ ಪಂಚಾಯತ ಸದಸ್ಯನಿಗೆ ರಕ್ಷಣೆ ನೀಡುವ ಜವಾಬ್ದಾರಿ ಕೂಡಾ ಇಲ್ಲಿನ ಸ್ಥಳೀಯ ಶಾಸಕರು ತೆಗೆದು ಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರಾಜ್ಯವನ್ನು ಉತ್ತರಪ್ರದೇಶ ಹಾಗೂ ಬಿಹಾರವಾಗಿಸಲು ಬಿಜೆಪಿ ಪಣತೋಟಿದೆಯಾ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯದ ಹರಿಕಾರರೆಂಬ ಹಣೆಪಟ್ಟಿ ಕಟ್ಟಿಕೊಂಡಿರು ಇಲ್ಲಿನ ಶಾಸಕರು ಈಗ ಎಲ್ಲಿ ಅಡಗಿ ಕುಳಿತ್ತಿದ್ದಾರೆ ಇಗ ಸಾಮಾಜಿಕ ನ್ಯಾಯ ಸತ್ತು ಹೊಗಿದೆಯಾ ಇದು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಯೇ ಎಂದು ಸ್ಥಳೀಯ ಶಾಸಕ ಶ್ರೀನಿವಾಸ ಶೆಟ್ಟಿಯವರನ್ನ ತರಾಟೆ ತೆಗೆದುಕೊಂಡು, ಶಾಂತಿಯುತ ಉಡುಪಿ ಜಿಲ್ಲೆಗೆ ಸಂಚಕಾರ ತಂದು ಎಸೆಗಿದ ಸ್ಥಳೀಯ ಜಿಲ್ಲಾ ಪಂಚಾಯತ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆಯನ್ನು ರಾಜೀನಾಮೆಗೆ ಆಗ್ರಹಿಸಿ ಕೊಲೆಯಾದ ಯುವಕರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯನ್ನು ಶ್ಲಾಘಿಸಿದ ಕಾಂಗ್ರೆಸಿಗರು!
ಕೋಟ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಒಂದು ವಿಶೇಷ ನಡೆದು ಹೊಯಿತು. ಅದು ಯಾವುದೇ ಪ್ರತಿಭಟನೆಯಲ್ಲಿ ವಿರೋಧ ಹಾಗೂ ಆಡಳಿತ ಪಕ್ಷಗಳ ಕೆಸರಾಟ ಸಾಮಾನ್ಯ ಆದರೆ ಸೋಮವಾರ ಕೋಟ ಬಸ್ಸ್ ನಿಲ್ದಾಣದ ಬಳಿ ಕಾಂಗ್ರೆಸ್ ಆಯೋಜಿಸಿದ ಕೊಲೆ ಸಂಬಂಧಿತ ಪ್ರತಿಭಟನೆಯಲ್ಲಿ ಆರೋಪಿ ಜಿಲ್ಲಾ ಪಂಚಾಯತ್ ರಾಘು ಕಾಂಚನ್ ರಾಜೀನಾಮೆ ಆಗ್ರಹಿಸಿದ ಸಭೆಯಲ್ಲಿ ಸ್ಥಳೀಯ ಜನನಾಯಕ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯ ಹೆಸರನ್ನು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಲಿಲ್ಲ. ಇನ್ನು ಅದರಲ್ಲೂ ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ಕೋಟ ಶ್ರೀನಿವಾಸ ಪೂಜಾರಿ ಯನ್ನು ಈ ಕೊಲೆ ಹೋರಾಟದಲ್ಲಿ ಪಾಲ್ಗೊಂಡು ಸಹಕರಿಸಿದನ್ನು ಸ್ಮರಿಸಿ ಶ್ಲಾಘಿಸಿದ್ದು ಭಾರೀ ವಿಶೇಷಕ್ಕೆ ಕಾರಣವಾಯಿತು.
ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದರು.ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ತೋನ್ಸೆ,ಅಲ್ಪಸಂಖ್ಯಾತ ಘಟಕರ ಇಸ್ಮಾಯಿಲ್ ಆತ್ರಾಡಿ,ಕಾಂಗ್ರೆಸ್ ಮುಖಂಡರುಗಳಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್,ಅಮೃತ್ ಶೆಣೈ,ರಾಜ್ಯ ಇಂಟ್ಯೇಕ್ ಅಧ್ಯಕ್ಷ ರಾಕೇಶ್ ಮಲ್ಲಿ,ರಾಜರಾಮ್ ಸಾಸ್ತಾನ, ಮಮತಾ ಶೆಟ್ಟಿ,ಮಲ್ಯಾಡಿ ಶಿವರಾಮ ಶೆಟ್ಟಿ, ಇಚ್ಚಿತಾರ್ಥ ಶೆಟ್ಟಿ,ಅಜಿತ್ ಶೆಟ್ಟಿ, ಕಿಶೋರ್ ಮಂದಾರ್ತಿ,ಜಿ ತಿಮ್ಮ ಪೂಜಾರಿ, ಸತೀಶ್ ಕಾರ್ಕಳ, ಶ್ರೀಧರ ಪಿ ಎಸ್ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಸದಸ್ಯ ಶ್ರೀನಿವಾಸ ಅಮೀನ್ ನಿರೂಪಿಸಿದರು.ಗಣೇಶ್ ನೆಲ್ಲಿಬೆಟ್ಟು ಸಹಕರಿಸಿದರು.