ಮಂಗಳೂರು: ಮಂಗಳೂರಿನ ಸ್ಥಳೀಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾದ ಮೇಯರ್ ಹಲ್ಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಮೇಯರ್ ವಾಸಸ್ಥಳವಿರುವ ಕಟ್ಟಡದ ಕಾವಲುಗಾರನ ಹೆಂಡತಿಗೆ ದಿನಗಳ ಹಿಂದೆ ಮೇಯರ್ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಪೋಲಿಸ್ ಠಾಣೆ ದೂರು ಸಲ್ಲಿಸಿದ್ದರು. ಪ್ರಕರಣವು ಕಾವೇರುತ್ತಿದ್ದಂತೆಯೇ ನಿನ್ನೆ ಬರ್ಕೆ ಪೋಲಿಸ್ ಸ್ಟೇಷನಿಗೆ ತಲುಪಿದ ಮೇಯರ್ ಕಾವಲುಗಾರನ ಹೆಂಡತಿ ಕಮಲ ತನ್ನ ಮಗಳ ಹತ್ಯೆಗೆ ಯತ್ನಿಸಿದ್ದಾನೆಂದು ದೂರು ನೀಡಿದ್ದಾರೆ.
"ಅಕ್ಟೋಬರ್ ೨೬ರಂದು ತನ್ನ ಮಗಳ ಕಾಲುಗಳಲ್ಲಿ ಸುಟ್ಟ ಗಾಯಗಳನ್ನು ಗಮನಿಸಿದ್ದೇನೆ. ಈ ಕುರಿತು ಮಗಳಲ್ಲಿ ವಿಚಾರಿಸಿದಾಗ ಕಾವಲುಗಾರನ ಮಗ ಬಿಸಿ ತಂತಿಯೊಂದನ್ನು ಕಾಲಿಗೆ ಹಚ್ಚಿ ಗಾಯಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ. ಇದಲ್ಲದೆ ಕಾವಲುಗಾರನ ಹೆಂಡತಿ ಕಮಲ ಕತ್ತು ಹಿಸುಕಿ ಹಾಗೂ ಕೆನ್ನೆಗೆ ಹೊಡೆದಿದ್ದಾಳೆ. ನೋವು ಸಹಿಸಲಾಗದೆ ತನ್ನ ಮಗಳು ಕಮಲ ತಲೆಗೆ ಕಚ್ಚಿ ಅವಳ ಕೈಯಿಂದ ಬಿಡಿಸಿಕೊಂಡು ಪಕ್ಕದ ಗೋಪಾಲ ಎಂಬವರ ಮನೆಗೆ ಹೋಗಿ ಆಶ್ರಯ ಪಡೆದೆ ಎಂದು ಹೇಳಿದ್ದಾಳೆ.
ಕಛೇರಿ ಕೆಲಸ ನಿಮಿತ್ತ ಹೊರಗಿದ್ದ ನನಗೆ ಮನೆಗೆ ಬಂದ ನಂತರ ಮಗಳ ಮೇಲಿನ ಹಲ್ಲೆಯ ಕುರಿತು ತಿಳಿಯಿತು. ಕಾರಣ ವಿಚಾರಿಸಿ ಕಾವಲುಗಾರ ಪುಂಡಲೀಕ ಹಾಗೂ ಆತನ ಪತ್ನಿಯಲ್ಲಿ ಮಾತಾನಾಡಿದಾಗ ಇಬ್ಬರೂ ತನ್ನ ಮಗಳನ್ನು ಕೊಲೆಗೈಯುವುದಾಗಿ ಬೆದರಿಕೆ ಹಾಕಿದ್ದಾರೆ" ಎಂದು ಮೇಯರ್ ನೀಡಿದ ದೂರಿನಲ್ಲಿ ಘಟನೆಯ ಬಗ್ಗೆ ವಿವರಿಸಲಾಗಿದೆ.