ಉಡುಪಿ, ಫೆ 11(SM): ಮೀನುಗಾರಿಕೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಕಣ್ಮರೆಯಾಗಿ ಸರಿ ಸುಮಾರು ಒಂದು ತಿಂಗಳು ಕಳೆದಿದೆ. ನಾಪತ್ತೆಯಾಗಿರುವ ಮೀನುಗಾರರನ್ನು ಕಂಡು ಹಿಡಿಯುವಂತೆ ಸಾಕಷ್ಟು ಬಾರೀ ಮಲ್ಪೆ ಮೀನುಗಾರರು ಪ್ರತಿಭಟನೆ ನಡೆಸಿವೆ. ಹೆದ್ದಾರಿ ಬಂದ್ ಮಾಡುವ ಮೂಲಕ ಸರಕಾರ ವಿರುದ್ದ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದರು.
ಮೀನುಗಾರರ ಪತ್ತೆ ಮಾಡುವಂತೆ ಮಲ್ಪೆ ಮೀನುಗಾರರ ಸಂಘ ಕೇಂದ್ರ ಸರ್ಕಾರದ ಮೊರೆ ಕೂಡಾ ಹೋಗಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯ ಮೀನುಗಾರರ ಮನವಿಗೆ ಸಕಾರತ್ಮಕವಾಗಿ ಸ್ಪಂದನೆ ನೀಡಿದ್ದು ತನ್ನ ಅಧೀನಕ್ಕೆ ಒಳಪಡುವ ಎಲ್ಲಾ ಇಲಾಖೆಗಳಿಗೆ ಮೀನುಗಾರರ ಪತ್ತೆ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಸರಕಾರಿ ಅದೇಶ ಹೊರಡಿಸಿದೆ. ಇದರೊಂದಿಗೆ ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳಿಗೆ ಕೂಡಾ ರಕ್ಷಣ ಕಾರ್ಯದಲ್ಲಿ ನೆರವಾಗುವಂತೆ ಆದೇಶಿಸಿದೆ.
ಇನ್ನು ಬೋಟ್ ಪತ್ತೆಗೆ ನಿರಂತರ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಮತ್ತೊಂದೆಡೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಳಂಬ ನೀತಿಯ ವಿರುದ್ಧ ಮೀನುಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಸರಕಾರಗಳಾ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದರು.