ಧರ್ಮಸ್ಥಳ ಅ 29: ಹೆಲಿಪ್ಯಾಡ್ ನಿಂದ ನೇರವಾಗಿ ಶ್ರೀ ಕ್ಷೇತ್ರದತ್ತ ತೆರಳಿದ ಪ್ರಧಾನಿಗೆ ದೇಗುಲದ ಬಳಿ ಪೂರ್ಣ ಕುಂಭ ಸ್ವಾಗತ ಹಾಗೂ ವೇಧ ಘೋಷಗಳ ಸ್ವಾಗತ ಕೋರಲಾಯಿತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಖುದ್ದು ದೇವಸ್ಥಾನದ ಮುಂಬಾಗಿಲಲ್ಲಿ ಹಾಜರಿದ್ದು ಸ್ವಾಗತ ಕೋರಿ ದೇವಸ್ಥಾನದ ಒಳಗೆ ಕರೆದೊಯ್ಯದರು. ದೇವಸ್ಥಾನದ ಸಂಪ್ರದಾಯದಂತೆ, ಪ್ರಧಾನಿ ಮೋದಿ ಪಂಚೆಯನ್ನು ಧರಿಸಿ ಮಂಜುನಾಥನ ದರ್ಶನ ಪಡೆದು ರುದ್ರಾಭೀಷೇಕ ಸಲ್ಲಿಸಿದ್ದಾರೆ. ಜತೆಯಲ್ಲಿಯೇ ಅಣ್ಣಪ್ಪ ಸ್ವಾಮಿ, ಮಹಾಗಣಪತಿ .ಹಾಗೂ ಅಮ್ಮನವರ ದರ್ಶನ ಪಡೆದಿದ್ದಾರೆ ದೇಗುಲದಲ್ಲಿ ಕೆಲ ಕಾಲ ದ್ಯಾನ ಮಾಡಿ , ಹೆಗ್ಗಡೆಯವರೊಂದಿಗೆ ಉಭಯ ಕುಶಲೋಪಚರಿ ವಿಚಾರಿಸಿದ್ದಾರೆ. ಉಜಿರೆಯತ್ತ ವಾಹನ ಮೂಲಕ ರಸ್ತೆ ಮೂಲಕ ಉಜಿರೆ ಕಡೆ ತೆರಳಿ ಸುಮಾರು 11.50೦ಕ್ಕೆ ಗ್ರಾಮಾಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.