ಉಜೆರೆ ಅ 29: " ನಮೋ ಮಂಜುನಾಥ.. ಧರ್ಮಸ್ಥಳದ ಬಂಧು ಭಗಿನಿಯರೇ ನಿಮಗೆ ನನ್ನ ನಮಸ್ಕಾರ.. ನನ್ನ ಪ್ರೀತಿಯ ಸಹೋದರಿಯರಿಗೆ ವಿಶೇಷ ಅಬಿನಂಧನೆಗಳು" ಎಂದು ಕನ್ನಡದಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿದಾಗ ನೆರೆದಿದ್ದ ಜನರ ಹಷೋದ್ಗಾರ ಮುಗಿಲು ಮುಟ್ಟಿತ್ತು . ಉಜಿರೆಯ ರತ್ನವರ್ಮ ಹೆಗ್ಗಡೆ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ನಡೆಯುತ್ತಿರುವ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ನರೇಂದ್ರ ಮೋದಿ ಮಂಜುನಾಥನ ದರ್ಶನ ಪಡೆಯಲು ದೊರಕ್ಕಿದ್ದು ನನ್ನ ಭಾಗ್ಯ ಎಂದರು. ಇದಕ್ಕೂ ಮೊದಲು ಮೋದಿಯವರಿಗೆ ಸಂಸದ ನಳಿನ್ಕುಮಾರ್ ಕಟೀಲ್ ಅವರು ಕಂಬಳದಲ್ಲಿ ಕೋಣಗಳಿಗೆ ಕಟ್ಟುವ ನೋಗದ ಆಕೃತಿಯ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿ ಸನ್ಮಾನಿಸಿದರು. ನಂತರ ಶಾಲಿನಿ ಮತ್ತು ಶಾಕೀಲ ಭಾನು ಎಂಬ ಇಬ್ಬರು ಫಲಾನುಭವಿಗಳಿಗೆ ರುಪೇ ಕಾರ್ಡ್ ವಿತರಿಸಿದರು. ಹೆಗ್ಗಡೆಯವರ ಮುಂದೆ ನಾನು ಸಾಮಾನ್ಯ, ಇಂತಹ ಮಹಾನ್ ತಪಸ್ವಿಯವರ ಮುಂದೆ ನಾನು ಬಹಳ ಚಿಕ್ಕವನು. ದೇಶದ ಜನರ ಪರವಾಗಿ ಹೆಗ್ಗಡೆಯವರನ್ನು ಸನ್ಮಾನಿಸಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತು ಆರಂಭಿಸಿದ ವೀರೇಂದ್ರ ಹೆಗ್ಗಡೆ. " ಇರೆಗ್ ಯಂಕಲ್ನ ಸ್ವಾಗತ" . ಎಂದು ಪ್ರಧಾನಿ ಮೋದಿಗೆ ತುಳುನಾಡಿಗೆ ಸ್ವಾಗತಿಸಿದರು.ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ತುಳುವಿನಲ್ಲೇ ಸ್ವಾಗತಿಸಿದರು. ಬಳಿಕ ತುಳು ಭಾಷೆಗೆ ಇತರ ಪ್ರಾದೇಶಿಕ ಭಾಷೆಗಳ ಸ್ಥಾನಮಾನ ಸಿಕ್ಕಿಲ್ಲ. ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ವೇದಿಕೆಯಲ್ಲೇ ನೆರೆದಿದ್ದ ಲಕ್ಷಕ್ಕೂ ಅಧಿಕ ಜನರ ಎದುರು ಮನವಿ ಮಾಡಿದರು. ಈ ಸಂದರ್ಭ ನೆರೆದಿದ್ದವರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಡಾ. ಹೆಗ್ಗಡೆ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವರಗಳನ್ನು ನೀಡಿ ನಮ್ಮ ಸಣ್ಣ ಗ್ರಾಮಕ್ಕೆ ಬಂದ ಮೋದಿಗೆ ಧನ್ಯವಾದಗಳು ಎಂದರು.