ಬಂಟ್ವಾಳ,ಫೆ 14(MSP): ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿ ವಿವಾಹ ಆಗುವುದಾಗಿ ಆಮಿಷ ಒಡ್ಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಬಂಟ್ವಾಳ ನಗರ ಠಾಣೆಯಲ್ಲಿ ಮಂಗಳವಾರ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ನೀರಪಾದೆ ನಿವಾಸಿ, ಕೂಲಿ ಕಾರ್ಮಿಕ ಸುಜಿತ್ ಪೂಜಾರಿ (24) ಬಂಧಿತ ಆರೋಪಿ. ಈತ 19 ರ ಹರೆಯದ ಪ.ಜಾತಿಗೆ ಸೇರಿದ ಬಾಗಲಕೋಟ ಮೂಲದ ಕೂಲಿ ಕಾರ್ಮಿಕೆಯನ್ನು ವಿವಾಹ ಆಗುವುದಾಗಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ವಿರುದ್ದ ಅತ್ಯಾಚಾರ ಮತ್ತು ಜಾತಿ ನಿಂದನೆ ಪ್ರಕರನ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಬಂಟ್ವಾಳ ಉಪವಿಭಾಗ ಎಎಸ್ ನಡೆಸುತ್ತಿದ್ದಾರೆ.