ಬೆಳ್ತಂಗಡಿ ಅ29 : ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ಅ 29 ರ ರವಿವಾರ ನಡೆದಿದೆ. ಆರು ತಿಂಗಳ ಮಗು ಹೆಣ್ಣು ಮಗು ಮತ್ತು ಐದು ವರ್ಷದ ಮಗ ದೀಕ್ಷಿತ್ ಜತೆ ತಾಯಿ ಜಯ (27) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ . ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.