ಬಂಟ್ವಾಳ ಅ 30: ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಕಾಂಗ್ರೆಸ್ನಿಂದ ಮನೆ ಮನೆ ಭೇಟಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಾಂಗ್ರೇಸ್ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕಾಂಗ್ರೇಸ್ ಹಮ್ಮಿಕೊಂಡಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೇಸ್ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ವಿಶೇಷವಾಗಿ ಬಂಟ್ವಾಳಕ್ಕೆ ಸಿ.ಎಂ.ಅವರು ಅನೇಕ ಜನಪರ ಯೋಜನೆಗಳನ್ನು ನೀಡಲು ಸಹಕಾರ ನೀಡಿದ್ದಾರೆ ಎಂದು ಅವರು ಇದೇ ಸಂದರ್ಭ ಹೇಳಿದರು. ಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ವಿಜಯ ಕಲ್ಳಿಗೆ, ಝೀಟಾ ಡಿ.ಸೋಜ, ದಿವಾಕರ ಪಂಬದಬೆಟ್ಟು, ಕಳ್ಳಿಗೆ ಗ್ರಾಮದ ಮನೆ ಮನೆಗೆ ಬೇಟಿ ಕಾರ್ಯಕ್ರಮದ ಉಸ್ತುವಾರಿ ಚಂದ್ರಹಾಸ ಪಲ್ಲಿಪಾಡಿ, ಡೆನ್ಜ್ಲ್, ಜರ್ನಾದನ ಚೆಂಡ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.