ಮಂಗಳೂರು, ಫೆ 19 (MSP): ತುಳು ನಾಟಕ ಎಂದರೆ ನಗಿಸಲಷ್ಟೇ ಸೀಮಿತ ಎಂದು ಭಾವಿಸಲಾಗುವ ಈ ದಿನಗಳಲ್ಲಿ ಹಿಂದಿನ ತುಳು ನಾಟಕದ ಘನತೆಯನ್ನು ಎತ್ತಿ ತೋರಿಸುವಂಥ ಒಂದು ಪ್ರಬುದ್ಧ ಸಾಂಸಾರಿಕ ನಾಟಕ ಬಯ್ಯ ಮಲ್ಲಿಗೆ.
ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ 54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ನಂತರ ಸಿನಿಮಾ ಆಗಿಯೂ ತೆರೆಕಂಡಿರುವ ಬಯ್ಯ ಮಲ್ಲಿಗೆ ನಾಟಕವನ್ನು ದುಬೈನ ಗಮ್ಮತ್ ಕಲಾವಿದೆರ್ ಇವರು ಪ್ರೀಶಿಯಸ್ ಪಾರ್ಟೀಸ್ ಆನ್ಡ್ ಎಂಟರ್ಟೈನ್ಮೆಂಟ್ ಇವರ ಸಂಯೋಗದೊಂದಿಗೆ ಫೆ.22 ಶುಕ್ರವಾರ ಸಂಜೆ 5 ಗಂಟೆಗೆ ದುಬೈಯ ಊದ್ ಮೇತಾದಲ್ಲಿರುವ ಶೇಖ್ ರಶೀದ್ ಸಭಾಂಗಣದಲ್ಲಿ ನಾಟಕ ಪ್ರದರ್ಶಿಸಿಸಲಿದ್ದಾರೆ.
ವಿಶ್ವನಾಥ್ ಶೆಟ್ಟಿ ಈ ನಾಟಕವನ್ನು ನಿರ್ದೇಶಿಸಲಿದ್ದು, ಸಾಕ್ಷಿ ಕಲಾವಿದೆರ್ ಬೆಳಪು ತಂಡದ ಸಾರಥಿ ಶುಭಕರ್ ಬೆಳಪು ಇವರು ಸಂಗೀತ ನೀಡಲಿದ್ದಾರೆ.ದುಬೈನಲ್ಲಿರುವ ತುಳು ನಾಟಕ ಅಭಿಮಾನಿಗಳಿಗೆ ನಾಟಕ ಸವಿ ಉಣಲು ಇದೊಂದು ಉತ್ತಮ ಅವಕಾಶ ಎಂದು ಗಮ್ಮತ್ ಕಲಾವಿದೆರ್ ಅಧ್ಯಕ್ಷೆ ಶ್ರೀಮತಿ ಸುವರ್ಣ ಸತೀಶ್ ಪೂಜಾರಿ ತಿಳಿಸಿದ್ದಾರೆ.