ಕಾರ್ಕಳ, ಫೆ 19(SM): ಬಾಡಿಗೆ ಮನೆಯಲ್ಲಿದ್ದ ಅಪ್ರಾಪ್ತೆಗೆ ಮನೆಯ ಮಾಲಿಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆಯೊಂದು ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಜೋಡುರಸ್ತೆ ಕಾರಲ್ಗುಡ್ಡೆ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಮಾಲಿಕ ಸ್ಥಳೀಯ ನಿವಾಸಿ ಸಂತೋಷ್.ಕೆ ವಿಕೃತಿ ಮೆರೆಯುತ್ತಿದ್ದ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ.
ಆರೋಪಿ ಸಂತೋಷ್ ನ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿತ್ತು. ಅವರ 5ರ ಹರೆಯದ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕಳೆದ ಒಂದೂವರೆ ತಿಂಗಳಿನಿಂದ ಆಕೆಯ ಗುಪ್ತಾಂಗಕ್ಕೆ ಕೈಹಾಕುವ ಮೂಲಕ ಗಾಯಗೊಳಿಸಿದ್ದ. ಮನೆಯಲ್ಲಿ ಮಗುವಿಗೆ ಸ್ನಾನಮಾಡಿಸುವ ವೇಳೆ ಪೋಷಕರು ಗಾಯದ ಬಗ್ಗೆ ವಿಚಾರಿಸಿದಾಗ ಈ ಕೃತ್ಯ ಬಯಲಿಗೆ ಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.