ಮಂಗಳೂರು ಅ 30: ಕೇಂದ್ರದ ಸಚಿವ ಸಂಪುಟದಲ್ಲಿ ಕ್ರಿಮಿನಲ್ ಹಿನ್ನಲೆ ಉಳ್ಳ ಸಚಿವರಿರುವಾಗ ಜಿಜೆಪಿಗೆ ರಾಜ್ಯದಲ್ಲಿ ಸಚಿವರಾದ ಕೆ,ಜೆ ಜಾರ್ಜ್ ಅವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ ಎಂದು ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು , ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿದ ಸಂದರ್ಭದಲ್ಲಿ ಸರ್ಕಾರ ಅವರಿಂದ ರಾಜೀನಾಮೆಯನ್ನು ಪಡೆದಿತ್ತು. ಆದರೆ ಬಿಜೆಪಿಯೂ ಇತಿಹಾಸವನ್ನು ತನ್ನ ಧೋರಣೆ ಗೆ ತಕ್ಕಂತೆ ಬದಲಾಯಿಸುತ್ತಿದ್ದಾರೆ.
ಸಚಿವ ಜಾರ್ಜ್ ಅತ್ಯುತ್ತಮ ಕೆಲಸ ಮಾಡುತ್ತಿರುವುದರಿಂದ ಪ್ರತಿ ಪಕ್ಷ ಬಿಜೆಪಿ ರಾಜೀನಾಮೆ ಪಡೆಯಲು ಕಾರಣ ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು. ಸಿಬಿಐನನ್ನು "ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಷಿಗೇಶನ್" ಎಂದು ಹೇಳುತ್ತಿದ್ದ ಬಿಜೆಪಿಗರು, ಇಂದು ಐಟಿಯನ್ನು ಕೇವಲ ಕಾಂಗ್ರೆಸ್ ಮುಖಂಡರ ಮನೆ ಕಚೇರಿಗಳ ದಾಳಿಗಷ್ಟೇ ಬಳಸಿಕೊಂಡಿದೆ. ಇದು ಕೇಂದ್ರ ಸರ್ಕಾರದ ಅಧಿಕಾರ ದುರುಪಯೋಗ ಅಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದ್ದು ದೇಶದಲ್ಲಿ ಹಿಟ್ಲರ್ ಶಾಹಿ ಧೋರಣೆ. ನೋಟ್ ಅಮಾನ್ಯಿಕರಣ, ಜಿಎಸ್ ಟಿಯನ್ನು ಜಾರಿಗೆ ತಂದು ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ನಿರ್ಮಾಣಮಾಡಿದೆ. ಜತೆಗೆ ಜಿ ಎಸ್ ಟಿ ವಿಫಲವಾದಾಗ ಕಾಂಗ್ರೇಸ್ ಕಡೆ ಬೊಟ್ಟು ಮಾಡುತ್ತಿದೆ ಎಂದರು. ಬಿಜೆಪಿಯ ಜನಾರ್ದನ ರೆಡ್ಡಿ ಗಣಿ ಹಗರಣ ದೇಶಕ್ಕೆ ಕಪ್ಪು ಚುಕ್ಕೆಯಾಗಿದೆ. ಬಳ್ಳಾರಿಯ ಅರಣ್ಯ ಭಾಗದ ಶೇಕಡಾ 60 ನಾಶ ಮಾಡಿದ್ದರುಎಂದು ಕಿಡಿಕಾರಿದರು.
ಉಪ ಚುನಾವಣೆಗಳಲ್ಲಿ ಫಲಿತಾಂಶ ಬಿಜೆಪಿ ಗೆ ವ್ಯತಿರಿಕ್ತವಾಗಿ ಬರುತ್ತಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ನಂತರ ಮೋದಿ ಭಾಷಣದ ಶೈಲಿಯೂ ಬದಲಾಗಿದೆ ಕಾದು ನೋಡಿ ಎಂದು ವ್ಯಂಗ್ಯವಾಡಿದರು.
ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಉಸ್ತುವಾರಿ ಸಚಿವರು ಕಲ್ಲಡ್ಕ ಶಾಲೆ ಅನುದಾನಿತ ಶಾಲೆಯಾಗಿದ್ದು, ಕೊಲ್ಲೂರಿನಿಂದ ದೇಣಿಗೆ ನೀಡುವಅಗತ್ಯವಿಲ್ಲ. ಹಾಗೇನಾದರೂ ದೇಣಿಗೆ ಕೊಟ್ಟರೆ ಅಕ್ಷಮ್ಯ ಅಪರಾಧವಾಗುತ್ತದೆ ಎಂದರು. ಟಿಪ್ಪು ಜಯಂತಿ ಆಚರಣೆ ಬಗ್ಗೆ ಉಲ್ಲೇಖಿಸಿದ ಸಚಿವರು ಯಾರಿಗೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿಲು ಮನಸ್ಸಿಲ್ಲ ಅಂತಹವರು ಅದರಲ್ಲಿ ಭಾಗವಹಿಸುವುದು ಬೇಡ. ಆದರೆ ವಿನಾ ಕಾರಣ ಕೆದಕುವ ಕೆಲಸ ಮಾತ್ರ ಮಾಡಬೇಡಿ ಎಂದರು.