ವಿಟ್ಲ, ಫೆ 20(MSP): ಅಂಚೆ ಕಚೇರಿ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಫೆ.20 ರ ಬುಧವಾರ ನಡೆದಿದೆ.
ಪೆರುವಾಯಿ ನಿವಾಸಿ ಫ್ರಾನ್ಸಿಸ್ ಅಸಿಸ್ ಮೃತ ಯುವಕ. ಮಂಗಳವಾರ ಬೆಳಗ್ಗೆ ಮನೆಯಿಂದ ಈತ ಕೆಲಸಕ್ಕೆ ತೆರಳಿದ್ದ. ಆದರೆ, ರಾತ್ರಿ ತನಕವೂ ಮರಳಿ ಮನೆಗೆ ಹಿಂತಿರುಗಿರಲಿಲ್ಲ. ಆದರೆ ಇಂದು ಬೆಳಗ್ಗೆ ಸ್ಥಳೀಯವಾಗಿರುವ ಪೆರುವಾಯಿ ಅಂಚೆ ಕಚೇರಿ ಪಕ್ಕದಲ್ಲಿ ಆತ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಯುವಕ ಕುಡಿತದ ಚಟಹೊಂದಿದ್ದ ಎಂಬುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಈತನ ಸಾವಿನ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.