ವೇಣೂರು, ಫೆ 21(MSP): ಗಂಜಿ ನೀರು ಮೈ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ 4ರ ಹರೆಯದ ಬಾಲಕಿ ಬುಧವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಿಲ್ಯ ಬದ್ರಿಯಾ ಊರಿನ ನಿವಾಸಿ ಖಾದರ್ ಮತ್ತು ರುಕಿಯಾ ದಂಪತಿ ಪುತ್ರಿ ನಿಶ್ಮಿಯಾ (4) ಮೃತ ಬಾಲಕಿಯಾಗಿದ್ದಾಳೆ.
ಫೆ.೧೩ ರಂದು ಮನೆಯ ಅಡುಗೆ ಕೋಣೆಯಲ್ಲಿ ಅನ್ನದ ಪಾತ್ರೆ ಒಲೆಯಿಂದ ತೆಗೆಯುತ್ತಿದ್ದ ಸಂದರ್ಭದಲ್ಲಿ ಆಟವಾಡುತ್ತಾ ಅಲ್ಲಿಗೆ ಬಂದ ಬಾಲಕಿ ನಿಶ್ಮಿಯಾ ಮೈ ಮೇಲೆ ಬಿಸಿ ಗಂಜಿ ನೀರು ಬಿದ್ದಿತ್ತು. ಪರಿಣಾಮ ಬಾಲಕಿ ಶೇಕಡಾ 50 ರಷ್ಟು ಸುಟ್ಟು ಹೋಗಿತ್ತು.
ತೀವ್ರ ಸುಟ್ಟು ಗಾಯಕ್ಕೊಳಗಾಗಿದ್ದ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಕುರಿತು ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.