ಮಂಗಳೂರು, ಫೆ 21(MSP):ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ತೆರವಾದ ಅವರ ಸ್ಥಾನಕ್ಕೆ ಸಂದೀಪ್ ಪಾಟೀಲ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಸಂದೀಪ್ ಪಾಟೀಲ್
ಟಿ.ಆರ್.ಸುರೇಶ್
ಮಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ಸಂದೀಪ್ ಪಾಟೀಲ್ ಅವರು ಪ್ರಸ್ತುತ ಡಿಐಜಿ ಮತ್ತು ಬೆಂಗಳೂರು ಸಿಎಆರ್ ಯುನಿಟ್ಸ್ನ ಸಹಾಯಕ ಆಯುಕ್ತರಾಗಿದ್ದಾರೆ. ಫೆ.20ರಿಂದಲೇ ಅನ್ವಯವಾಗುವಂತೆ ಸರ್ಕಾರ ಈ ಆದೇಶ ಹೊರಡಿಸಿದ್ದು, ಇವರಲ್ಲದೆ 30 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.