ಬಳ್ಳಾರಿ ಅ31: ನವೆಂಬರ್ 1 ರಂದು ಆಸ್ಥಿತ್ವಕ್ಕೆ ಬರಲಿರುವ ಮಾಜಿ ಪೋಲಿಸ್ ಅಧಿಕಾರಿ ಅನುಪಮ ಶೆಣೈ ಅವರ ನೂತನ ರಾಜಕೀಯ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಗೆ 80 ಸೀಟುಗಳಲ್ಲಿ ಸ್ಪರ್ಧಿಸಲಿದೆ.
ನಿನ್ನೆ ಬಳ್ಳಾರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅನುಪಮ ಪಕ್ಷದ ಹೆಸರು ಹಾಗೂ ಘಟಣೆಯನ್ನು ಅಸ್ಥಿತ್ವದ ದಿನದಂದೇ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.
" ಹೊಸ ಪಕ್ಷವು ಆರ್ಥಿಕವಾಗಿ ಯಾವುದೇ ಮೂಲ ಬಂಡವಾಳವಿಲ್ಲದೆ ಸ್ಥಾಪಿತವಾಗಲಿದೆ. ನಾನು ಯಾವ ಕ್ಷೇತ್ರದಿಂದ ಸ್ಪರ್ದಿಸಬೇಕೆಂದು ಈ ವರೆಗೆ ನಿರ್ಧಾರ ಮಾಡಿಲ್ಲ. ಪಕ್ಷ ಸ್ಥಾಪನೆಯ ನಂತರ ಪಕ್ಷದ ಮುಖಂಡರ ಸಮಿತಿಯು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಮ್ಮ ಪಕ್ಷವು ಆಮ್ ಆದ್ಮಿ ಪಾರ್ಟಿ ಅರವಿಂದ ಕೇಜ್ರಿವಾಲರ ತತ್ವ ಹಾಗೂ ಕೆಲ ಪ್ರಯೋಗಗಳನ್ನು ಅಳವಡಿಸಿಕೊಳ್ಳಲಿದೆ. ನಾನು ಆಧಿಕಾರದಲ್ಲಿ ಇದ್ದಾಗ ಭ್ರಷ್ಟ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ವಿರೋಧಿಸಿದ್ದೆ. ಆದರೆ ನಾನು ಎಂದೂ ರಾಜಕಾರಣವನ್ನು ವಿರೋಧಿಸಿಲ್ಲ. ಎಲ್ಲಾ ಪಕ್ಷಗಳು ಉತ್ತಮ ಆಡಳಿತ ಹಾಗೂ ಭ್ರಷ್ಟಚಾರ ವಿರೋಧಿ ಭರವಸೆಯನ್ನು ನೀಡುತ್ತಿವೆ ಆದರೆ ನಮ್ಮ ಪಕ್ಷ ಕಾನೂನಾತ್ಮಕ ಆಡಳಿತದ ಬಗ್ಗೆಯೂ ಗಮನ ಹರಿಸಲಿದೆ" ಎಂದು ಅವರು ಪಕ್ಷದ ಧ್ಯೇಯದ ಕುರಿತು ಮಾಹಿತಿ ನೀಡಿದರು.