ಕುಂದಾಪುರ,ಫೆ,24 (MSP): ಇಲ್ಲಿನ ಕೊಲ್ಲೂರು ಸಮೀಪದಲ್ಲಿ ಬೇಟೆಗಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ಅಪರೂಪದ ಶಿಲಾಚಿತ್ರ (ರಾಕ್ ಆರ್ಟ್) ಪತ್ತೆಯಾಗಿದೆ. ಸುಮಾರು 15 ಎಕರೆ ವಿಸ್ತಾರ ಸ್ಥಳದಲ್ಲಿ ಅಪರೂಪದ 19ಕ್ಕೂ ಮಿಕ್ಕಿ ಅಪರೂಪದ ಶಿಲಾಚಿತ್ರ ಗೋಚರಿಸಿದೆ ಎಂದು ಇತಿಹಾಸ ಪ್ರಾಧ್ಯಾಪಕ ಪ್ರೋ. ಮುರುಗೇಶಿ.ಟಿ ತಿಳಿಸಿದ್ದಾರೆ.
ಬೇಟೆಗಾರ ಸಂಗ್ರಹಕಾರ ಸಂಸ್ಕೃತಿ ಬಿಂಬಿಸುವ ಶಿಲಾಚಿತ್ರ ಪತ್ತೆಯಾಗಿರುವ ಭಾರತ ಪಶ್ಚಿಮ ಕರಾವಳಿಯ ಏಕೈಕ ತಾಣ ಇದಾಗಿದ್ದು, ಫೆ 17ರಂದು ಗೋಚರಿಸಿದೆ. ಇಂದು ಅಂದರೆ ಫೆ.24 ರಂದು ಈ ಶಿಲಾಚಿತ್ರಗಳ ಸಮಗ್ರ ಅಧ್ಯಯನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.