ಮಂಗಳೂರು,ಫೆ 24 (MSP):ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ 48 ಗಂಟೆಗಳಲ್ಲಿ ಸಂದೀಪ್ ಪಾಟೀಲ್ ಮಂಗಳೂರು ಜಿಲ್ಲಾ ಕಾರಗೃಹಕ್ಕೆ ಫೆ. 24 ರ ಭಾನುವಾರ ಬೆಳಗ್ಗೆ ಧಿಡೀರ್ ದಾಳಿ ನಡೆಸಿ ಖಡಕ್ ಸಂದೇಶ ರವಾನಿಸಿದ್ದಾರೆ. ಡಿಸಿಪಿ ಕ್ರೈಂ ನೇತೃತ್ವದಲ್ಲಿ ದಾಳಿ ನಡೆಸಿದ್ದು ದಾಳಿ ವೇಳೆ ಆರೋಪಿಗಳಿಂದ ದೊರೆತ 6 ಮೊಬೈಲ್ ಹಾಗೂ 4 ಚೂರಿನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಂಗಳೂರಿನ ಜೈಲಿನಲ್ಲಿ ನಡೆದ ಇತ್ತೀಚಿನ ಕೆಲ ಘಟನೆಗಳನ್ನ ಆಧರಿಸಿ ದಾಳಿ ನಡೆಸಿದ್ದೇವೆ. ದಾಳಿ ಸಂದರ್ಭ ಖೈದಿಗಳಲ್ಲಿದ್ದ 6 ಮೊಬೈಲ್ ಹಾಗೂ 4 ಚೂರಿಗಳನ್ನು ವಶಪಡಿಸಿಕೊಂಡಿದ್ದೇವೆ. ದೊರೆತ ಮೊಬೈಲ್ ಗಳಲ್ಲಿ ಕರೆಗಳನ್ನು ಪರಿಶೀಲಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಕೆಲ ದಿನಗಳಲ್ಲಿ ಮತ್ತೆ ದಾಳಿಯನ್ನ ಮುಂದುವರಿಸಲಿದ್ದು, ಇನ್ನು ಮುಂದೆ ಜಿಲ್ಲಾ ಕಾರಾಗೃಹದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರವಾನಿಸಿದ್ರು.
ದಾಳಿಯಲ್ಲಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಅಯುಕ್ತರು ಮಂಗಳೂರು ಉತ್ತರ ಉಪ ವಿಭಾಗ , ಸಹಾಯಕ ಪೊಲೀಸ್ ಆಯುಕ್ತರು ನಗರ ಸಶಸ್ತ್ರ ವಿಭಾಗ, ಸಹಾಯಕ ಪೊಲೀಸ್ ಆಯುಕ್ತರು ಸಂಚಾರ ಉಪ ವಿಭಾಗ , ಪೊಲೀಸ್ ನಿರೀಕ್ಷಕರು ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣೆ ಹಾಗೂ ಇನ್ನಿತರ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.