ಉಡುಪಿ ಅ31: "ರಾಮಚಂದ್ರಾಪುರ ಮಠದ ಸ್ವಾಮೀಜಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಪ್ರಕಾರ ದನದ ಹಾಲನ್ನು ಸೇವಿಸುವ ಪ್ರತಿಯೊಬ್ಬ ವೆಕ್ತಿಯೂ ಗೋವುಗಳ ರಕ್ಷಣೆಗೆ ಬದ್ಧನಾಗಿರಬೇಕು. ಪ್ರಸ್ತುತ ಭಾರತದಲ್ಲಿ ಗೋವುಗಳ ರಕ್ಷಣೆಯು ಅತೀ ಪ್ರಮುಖವಾದ ಕಾರ್ಯವಾಗಿ ಮಾರ್ಪಾಡುಗೊಳ್ಳಬೇಕಾಗಿದೆ. ಇದೇ ಉದ್ದೇಶವನ್ನು ಇಟ್ಟುಕೊಂಡು ಸ್ವಾಮೀಜಿಗಳ ನಿರ್ದೇಶನಕ್ಕೆ ಅನುಗುಣವಾಗಿ ’ಭಾರತೀಯ್ ಗೋ ಪರಿವಾರ್’ ಸ್ಥಾಪನೆಯಾಗಿದೆ."ಎಂದು ಭಾರತೀಯ ಗೋ ಪರಿವಾರದ ರಾಜ್ಯಧ್ಯಕ್ಷರಾದ ಉದಯಶಂಕರ್ ಭಟ್ ಹೇಳಿದ್ದಾರೆ.
ಅವರು ಅಕ್ಟೋಬರ್ 30 ರಂದು ಉಡುಪಿಯಲ್ಲಿ ನಡೆದ ಗೋ ಪರಿವಾರ್ ಸಂಘಟನೆ ಆರಂಭ ಕುರಿತಾದ ಪ್ರಾಥಮಿಕ ಸಭೆಯಲ್ಲಿ ಮಾತನಾಡುತ್ತಿದ್ದರು. "ಭಾರತದಲ್ಲಿ ಗೋವುಗಳ ಸಂಖ್ಯೆ ವೃದ್ಧಿಯಾಗಬೇಕಾಗಿದೆ. ಪ್ರಸ್ತುತ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ’ಗೋ ಪರಿವಾರ್’ಸ್ಥಾಪನೆಯಾಗಿದೆ. 32 ವಲಯಗಳಾಗಿ ರಾಜ್ಯದಲ್ಲಿ ಈ ಸಂಘಟನೆ ಕಾರ್ಯಚರಿಸುತ್ತದೆ ಹಾಗೂ ಗೋವುಗಳ ರಕ್ಷಣೆಗೆ ಪಣತೊಟ್ಟು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಗೋವುಗಳ ರಕ್ಷಣೆಗೆ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಈಗಾಗಲೇ ’ಅಭಯಾಕ್ಷರ’ ಎಂಬ ಚಳುವಳಿಯನ್ನು ಆರಂಭಿಸಲಾಗಿದೆ. ಉಡುಪಿಯಲ್ಲಿ ಈ ಸಂಘಟನೆಯ ಅತೀ ಅಗತ್ಯವಿದೆ." ಎಂದು ಸಂಘಟನೆಯ ಬಗ್ಗೆ ಅವರು ವಿವರಣೆ ನಿಡಿದರು.
ಗೋ ಪರಿವಾರ್ ವಲಯ ಅಧ್ಯಕ್ಷೆ ಶೈಲಜ ಭಟ್ , ಗುಣವಂತೇಶ್ವರ ಭಟ್ ಉಪಸ್ಥಿತರಿದ್ದರು.