ಉಡುಪಿ, ಫೆ 25(SM): 'ಕಾಂಗ್ರೆಸ್ ಸತ್ಯ, ನ್ಯಾಯ ನೀತಿ ಒಂದು ಕಡೆ ಆದ್ರೆ ಬಿಜೆಪಿ ಅಸತ್ಯ, ಅನ್ಯಾಯ ಮತ್ತು ಅನೀತಿಯ ಪರವಾಗಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವ ಕಾಂಗ್ರೆಸ್ ಪ್ರತಿಪಾದಿಸಿತ್ತು. ಮೋದಿಯ ಭರವಸೆ ಎಲ್ಲವೂ ಸುಳ್ಳಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಚ್ಚೇ ದಿನ್ ಬಂದಿಲ್ಲ. ಕೋಟಾ ನೋಟು, ಕಳ್ಳ ನೋಟು, ಉದ್ಯೋಗ ಸೃಷ್ಟಿಸುವ ಭರವಸೆ, ಆರ್ಥಿಕ ಅಭಿವೃದ್ದಿ, ರೈತರ ಆದಾಯ ದ್ವಿಗುಣಗೊಳಿಸುವುದು ಎಲ್ಲವೂ ಹುಸಿಯಾಗಿದೆ. ಯಾವುದೇ ವಿಚಾರಗಳು ಕೂಡ ಅನುಷ್ಠಾನವಾಗಿಲ್ಲ. ಬಿಜೆಪಿ ಒಂದು ಸುಳ್ಳಿನ ಪಕ್ಷ, ಭಾರತೀಯ ಜೂಟಾ ಪಾರ್ಟಿ ಎಂದು ವ್ಯಂಗ್ಯವಾಡಿದರು.
ಕಳೆದ ಐದು ವರ್ಷದಲ್ಲಿ ತಂದ ಕಾಳದನ ಬಗ್ಗೆ ಪ್ರಧಾನಿ ಮಾಹಿತಿ ಕೊಡಲಿ. ಪ್ರಧಾನಿ ಮೋದಿ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಟೀಕಿಸಿದ್ದಾರೆ.