ಸುಬ್ರಹ್ಮಣ್ಯ, ಫೆ 27 (MSP): ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನವನ್ನು ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಒಪ್ಪಿಸಬೇಕು ಎಂದು ಮುಜರಾಯಿ ಇಲಾಖೆಗೆ ಲಾಯರ್ ನೋಟಿಸ್ ನೀಡಿರುವುದರ ವಿರುದ್ದ ದೇವಳದ ಭಕ್ತರ ಹಿತರಕ್ಷಣಾ ವೇದಿಕೆ ವತಿಯಿಂದ ಮಾ.7 ರಂದು ಸುಬ್ರಮಣ್ಯ ಬಂದ್, ಶಾಂತಿಯುತ ಪ್ರತಿಭಟನಾ ಮೆರೆವಣಿಗೆ ಮತ್ತು ಪ್ರತಿಭಟನಾ ಸಭೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕೆ.ಎಸ್ ಹೇಳಿದರು.
ಮಂಗಳವಾರ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಸಾರ್ವಜನಿಕ ಸಂಸ್ಥೆ. ಇದನ್ನು ಖಾಸಗಿ ಮಠಕ್ಕೆ ನೀಡಬೇಕು ಎನ್ನುವುದು ಸರಿಯಲ್ಲ. ಸರ್ವ ಭಕ್ತರೂ ಜಾಗೃತರಾಗಿ ದೇವಾಲಯ ರಕ್ಷಿಸಬೇಕು ಎಂದರು. ದೇವಸ್ಥಾನವನ್ನು ಮಠಕ್ಕೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟ ವಿಚಾರದಲ್ಲಿ ಯಾವ ರಾಜಕಾರಣಿಯೂ ಧ್ವನಿ ಎತ್ತುತ್ತಿಲ್ಲ. ರಾಜಕಾರಣಿಗಳು ಮೌನವಹಿಸಿರ್ವುದು ಅಪಾಯದ ಸಂಕೇತ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ್ ರಾವ್ ಹೇಳಿದ್ದಾರೆ.