ಕುಂದಾಪುರ,ಫೆ 27 (MSP):ದಕ್ಷಿಣ ಕನ್ನಡದ ರೈತದಿಂದ ಪ್ರಾರಂಭವಾದ ವಿಜಯಾ ಬ್ಯಾಂಕ್ ಈ ಭಾಗದ ಹೆಮ್ಮೆಯ ಪ್ರತೀಕವಾಗಿದೆ. ಆದರೆ ಈಗ ಅದನ್ನು ವಿಲೀನ ಮಾಡಿದರೆ ನಮ್ಮ ಭಾವನೆಗಳಿಗೆ ದಕ್ಕೆಯಾಗುತ್ತದೆ, ಲಾಭದಲ್ಲಿರುವ ವಿಜಯಾ ಬ್ಯಾಂಕ್ನ್ನು ನಷ್ಟದಲ್ಲಿರುವ ಇತರ ಬ್ಯಾಂಕ್ಗಳೊಡನೆ ವಿಲೀನಗೊಳಿಸುವುದು ಬ್ಯಾಂಕ್ನ ಹಾಗೂ ಗ್ರಾಹಕರ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಮತ್ತು ವಿಜಯಾ ಬ್ಯಾಂಕ್ ನಮ್ಮ ಭಾವನೆಗಳ ಜೊತೆ ಹೊಂದಿಕೊಂಡಿದ್ದು, ವಿಲೀನಗೊಂಡ ಬ್ಯಾಂಕ್ಗೆ ಬಿ.ಓ.ಬಿ. ಎಂಬ ಹೆಸರಿಡದೆ ವಿಜಯಾ ಬ್ಯಾಂಕ್ ಎಂಬ ಹೆಸರೇ ನೀಡಬೇಕು. ಒಟ್ಟಿನಲ್ಲಿ ವಿಲೀನ ಪ್ರಕ್ರೀಯೆಯನ್ನು ತಡೆಹಿಡಿಯಬೇಕು ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಹೇಳಿದರು.
ವಿಜಯಾ ಬ್ಯಾಂಕ್ನ್ನು ಬಿ.ಓ.ಬಿ ಹಾಗೂ ದೇನಾ ಬ್ಯಾಂಕ್ನೊಡನೆ ವಿಲೀನ ಪೃಕ್ರೀಯೆಯನ್ನು ವಿರೋಧಿಸಿ ಬೈಂದೂರು ಬ್ಲಾಕ್ ಕಾಂಗ್ರೇಸ್ ಮಾರ್ಗದರ್ಶನದಲ್ಲಿ ನಾಡ ಗ್ರಾಮೀಣ ಕಾಂಗ್ರೇಸ್ ಸಮಿತಿ ವತಿಯಿಂದ ವಿಜಯಾ ಬ್ಯಾಂಕ್ ನಾಡ ಗುಡ್ಡೆಯಂಗಡಿ ಎದುರು ಬುಧವಾರ ಬೆಳಿಗ್ಗೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಬೈಂದೂರು ಇದರ ಅಧ್ಯಕ್ಷ ಶೇಖರ್ ಪೂಜಾರಿ, ಪಕ್ಷದ ಮುಖಂಡರಾದ ವಾಸುದೇವ ಯಡಿಯಾಳ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಜೇನ್ ಮೇರಿ ಒಲಿವೇರಾ, ಮೋಹನ್ ಪೂಜಾರಿ, ಕೆನಾಡಿ ಪಿರೇರಾ, ರಾಮ ಪೂಜಾರಿ ಸೇರಿದಂತೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮನವಿಯನ್ನು ವಿಜಯಾ ಬ್ಯಾಂಕ್ನ ಪ್ರಬಂಧಕರಾದ ಗಿರೀಶ್ರವರಿಗೆ ನೀಡಿದರು.