ಉಡುಪಿ,ಮಾ 01 (MSP): ಶಿವಮೊಗ್ಗ ಜಿಲ್ಲೆಯಲ್ಲಿ ಮಾರಕ ಮಂಗನ ಖಾಯಿಲೆಗೆ ಮತ್ತೊಂದು ಬಲಿಯಾಗಿದೆ . ಮಂಗನ ಖಾಯಿಲೆಯಿಂದ ಬಳಲುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರು ಮಾ.1 ರ ಶುಕ್ರವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಪಾರ್ಶ್ವನಾಥ (68) ಎಂದು ಗುರುತಿಸಲಾಗಿದೆ. ಸಾಗರ ಮೂಲದವರಾದ ಪಾರ್ಶ್ವ ನಾಥ ಅವರು ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಬೆಳಗ್ಗೆ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.