ಉಡುಪಿ ಅ 31: ಪ್ರತಿ ಭಾರೀ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಪಕ್ಷಗಳ ಸದಸ್ಯರು ನಗರಸಭೆ ಆಡಳಿತ ವಿರುದ್ದ ಕಿಡಿ ಕಾರುತ್ತಿದ್ರೆ ಈ ಬಾರೀಯ ಆಡಳಿತ ಪಕ್ಷದ ಸದಸ್ಯರೇ ನಗರಸಭೆ ಆಡಳಿತ ವವ್ಯಸ್ಥೆಯ ವಿರುದ್ದ ಅಸಮಾಧನ ವ್ಯಕ್ತಪಡಿಸಿದ ವಿಲಕ್ಷಣ ಘಟನೆ ಇಂದು ನಡೆದ ಉಡುಪಿಯ ನಗರಸಭೆಯ ಸಾಮಾನ್ಯಸಭೆಯಲ್ಲಿ ನಡೆದಿದೆ. ನಗರಸಭೆ ಅದ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ ಅವರ ಅದ್ಯಕ್ಷತೆಯಲ್ಲಿ ನಗರಸಭೆ ಸಾಮಾನ್ಯ ಸಭೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಕುರಿತು ವಿಷಯ ಪ್ರಸ್ತಾಪಿಸಿದ್ರು. ಕಳೆದ ಹಲವು ತಿಂಗಳಿಂದ ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ. ಈ ಬಗ್ಗೆ ಹಲವಾರು ಭಾರೀ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಆದ್ರೆ ಈವರೆಗೆ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. ದಾರಿ ದೀಪದ ನಿರ್ವಹಣೆಯ ಬಗ್ಗೆ ಸಮರ್ಪಕ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ರು. ವಿಪಕ್ಷಗಳ ಆಗ್ರಹಕ್ಕೆ ಆಡಳಿತ ಸದಸ್ಯರು ಕೂಡಾ ದ್ವನಿಗೂಡಿಸಿದ್ರು. ಕಳೆದ ನಾಲ್ಕು ವರ್ಷಗಳಿಂದ ದಾರಿ ದೀಪಗಳ ನಿರ್ವಹಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ದಾರಿ ದೀಪ ನಿರ್ವಹಣೆಯ ಟೆಂಡರ್ ಪಡೆದ ಗುತ್ತಿಗೆದಾರರು ದಾರಿ ದೀಪದ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ನಗರಸಭೆ ಕೂಡಾ ಈ ಬಗ್ಗೆ ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಮಲ್ಪೆ ಬೀಚ್ ಅಭಿವೃದ್ದಿ ವಿಚಾರದ ಬಗ್ಗೆ ಕೂಡಾ ಚರ್ಚೆ ನಡೆಯಿತು. ಕಳೆದ ೪ ವರ್ಷಗಳಿಂದ ಮಲ್ಪೆ ಬೀಚ್ನಲ್ಲಿ ಅಭಿವೃದ್ದಿ ಕೆಲಸ ಕುಂಠಿತಗೊಂಡಿದೆ. ಮಲ್ಪೆ ಅಭಿವೃದ್ದಿಗೆ ಅನುದಾನ ಕೂಡಾ ಸರಕಾರ ಮೀಸಲಿಟ್ಟಿದೆ. ಮಲ್ಪೆ ಅಭಿವೃದ್ಧಿ ಬೀಚ್ ಸಮಿತಿ ರಚಿಸಲಾಗಿದೆ. ಆದ್ರೆ ಮಲ್ಪೆ ಬೀಚ್ನಲ್ಲಿ ಅಭಿವೃದ್ದಿ ಮರೀಜಿಕೆಯಾಗಿದೆ ಎಂದು ನಗರಸಭೆ ಆಡಳಿತ ಸದಸ್ಯ ಪ್ರಶಾಂತ್ ಅಮೀನ್ ಆಕ್ರೋಶವ್ಯಕ್ತಪಡಿಸಿದ್ರು. ಮಲ್ಪೆ ಬೀಚ್ನ ಅಭಿವೃದ್ದಿಯ ವಿಚಾರದ ಬಗ್ಗೆ ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಇದರ ಸಂಪೂರ್ಣ ಆಡಳಿತ ಜಿಲ್ಲಾಧಿಕಾರಿಗಳಿಗೆ ಸಂಬಂದಪಟ್ಟಿದ್ದು ಎಂದು ಸದಸ್ಯ ಪ್ರಶಾಂತ ಅಮೀನ್ ಅವರ ಪ್ರಶ್ನೆಗೆ ಪೌರಯುಕ್ತರು ಪ್ರತ್ಯುತ್ತರ ನೀಡಿದ್ರು. ಪೌರಯುಕ್ತರ ಉತ್ತರದಿಂದ ಸದಸ್ಯ ಪ್ರಶಾಂತ್ ರೊಚ್ಚಿಗೆದ್ರು. ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿಯಾಗಿರುವ ನೀವು ಮಲ್ಪೆ ಬೀಚ್ನ ಅಭಿವೃದ್ದಿಯ ವಿಚಾರದ ಬಗ್ಗೆ ಉತ್ತರ ನೀಡಲಾಗುತ್ತಿಲ್ಲ ಅನ್ನುತ್ತೀರಿ. ಹಾಗದ್ರೆ ಕೇವಲ ನೀವು ಸಚಿವರು ಭಾಗವಹಿಸುವ ಸಭೆ ಸಮಾರಂಭ ಹಾಗೂ ಗುದ್ದಲಿ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಮಾತ್ರ ಸೀಮಿತರಾಗಿದ್ದೀರ ಎಂದು ಪೌರಯುಕ್ತರನ್ನು ಟೀಕಿಸಿದ್ರು. ಪ್ರತಿ ಬಾರೀಯೂ ಗದ್ದಲದ ಗೂಡಾಗಿದ್ದ ಉಡುಪಿ ನಗರಸಭೆಯ ಸಾಮಾನ್ಯ ಸಭೆ ಇಂದು ಬಾರೀ ಗಂಭೀರ ಚರ್ಚೆಯ ವೇದಿಕೆಯಾಗಿತ್ತು. ನಗರಸಭೆ ಆಡಳಿತ ವೈಪಲ್ಯದ ವಿರುದ್ದ ವಿಪಕ್ಷ ಸದಸ್ಯರೇ ಪ್ರತಿ ಬಾರೀ ಛೀಮಾರಿ ಹಾಕುತ್ತಿದ್ರೆ ಈ ಭಾರೀಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರೇ ನಗರಸಭೆ ಆಡಳಿತದ ವಿರುದ್ದ ಚೀಮಾರಿ ಹಾಕಿದ್ದು ಆಡಳಿತ ಪಕ್ಷಕ್ಕೆ ಬಾರೀ ಮುಖಭಂಗವಾಯಿತು.