ಮಂಗಳೂರು, ಮಾ 04(SM): ಕಾಂಗ್ರೇಸ್ ಗೆ ದೇಶದ ಚಿಂತೆ ಬಿಜೆಪಿಗೆ ಸೀಟಿನ ಚಿಂತೆ ಎಂದು ಸಚಿವ ಖಾದರ್ ನೀಡಿರುವ ಹೇಳಿಕೆಗೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಗೆ ರಾಷ್ಟ್ರದ ಹಾಗೂ ಸೈನಿಕರ ಬಗ್ಗೆ ಚಿಂತೆಯಾಗಿದ್ದು, ಕಾಂಗ್ರೆಸ್ ಗೆ ಭಯೋತ್ಪಾದಕರ ಚಿಂತೆ ಎಂಬುವುದಾಗಿ ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದ್ದಾರೆ.
ಇನ್ನು ಸರ್ಜಿಕಲ್ ಸ್ಟೈಕ್ ಬಗ್ಗೆ ಬಿಎಸ್ ವೈ ಅವಹೇಳನಕಾರಿ ಹೇಳಿಕೆಯನ್ನು ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಯಡಿಯೂರಪ್ಪ ಹೇಳಿಕೆ ಸಮರ್ಥಿಸಿಕೊಂಡ ಕೋಟಾ ಪೂಜಾರಿ, ವಾಯು ದಾಳಿಯಿಂದ ಮೋದಿ ವರ್ಚಸ್ಸು ಹೆಚ್ಚಾಗಿದೆ. ಬಿಎಸ್ ವೈ ಹೇಳಿಕೆಯಲ್ಲಿ ದುರುದ್ದೇಶ ಇರಲಿಲ್ಲ. ಯುದ್ದದಿಂದ ನಾವು ಗೆಲ್ಲುವುದಿಲ್ಲ. ಮೋದಿ ಕಠಿಣ ನಿರ್ಧಾರದ ಬಗ್ಗೆ ಬಿಎಸ್ ವೈ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ನವರಿಗೆ ಮತ ಯಂತ್ರದ ಬಗ್ಗೆ ಅನುಮಾನವಿದೆ.ಕಾಂಗ್ರೆಸ್ ನವರು ಗೆದ್ದ ಕಡೆ ಮತ ಯಂತ್ರದ ಬಗ್ಗೆ ಮಾತನಾಡಲ್ಲ. ಕಾಂಗ್ರೆಸ್ ಸೋತಿರುವ ಕಡೆ ಮಾತ್ರ ಮತಯಂತ್ರದಲ್ಲಿ ದೋಷ ಇದೆ ಅಂತಾರೆ. ಈ ಬಗ್ಗೆ ಈಗಾಗಲೇ ಅನುಮಾನ ಸರಿಪಡಿಸಿಕೊಳ್ಳಲಿ ಎಂದಿದ್ದಾರೆ. ಇನ್ನು ಸುಮಲತಾಗೆ ಬಿಜೆಪಿ ಬೆಂಬಲಿಸೋ ಬಗ್ಗೆ ನಾಯಕರು ನಿರ್ಧರಿಸುತ್ತಾರೆ. ಆದರೆ ನಾವು ನಮ್ಮ ಪ್ರಬಲ ಸ್ಪರ್ಧಿಯನ್ನ ನಿಲ್ಲಿಸಿ ಆ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಉಮೇಶ್ ಜಾದವ್ ರಾಜೀನಾಮೆ ಕೊಟ್ಟ ಸುದ್ದಿ ಬಂದಿದೆ. ಬಹುತೇಕ ನಾಡಿದ್ದು ಅವರು ಬಿಜೆಪಿ ಪಕ್ಷ ಸೇರುತ್ತಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅತೃಪ್ತಿ ಹೊಂದಿದವರ ಸಂಖ್ಯೆ ತುಂಬಾ ಇದೆ. ಹೀಗಾಗಿ ಎಷ್ಟು ಜನ ಬರ್ತಾರೆ ಅನ್ನೋದು ಗೊತ್ತಿಲ್ಲ, ಉಮೇಶ್ ಜಾದವ್ ಆಗಮನಕ್ಕೆ ಸ್ವಾಗತವಿದೆ ಎಂದಿದ್ದಾರೆ.
ಇನ್ನು ಮಂಡ್ಯದಿಂದ ನಿಖಿಲ್ ಕುಮಾರ ಸ್ವಾಮಿಗೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಹುತೇಕ ರಾಜಕೀಯ ಪಕ್ಷಗಳಲ್ಲಿ ಸಾಮಾನ್ಯವಾಗಿ ತಂದೆ-ಮಗನವರೆಗೆ ಬರುತ್ತದೆ. ಆದರೆ ಜೆಡಿಎಸ್ ಎರಡು ಹೆಜ್ಜೆ ಮುಂದೆ ಹೋಗಿದ್ದು, ತಂದೆ ಪ್ರಧಾನಿಯಾಗ್ತಾರೆ, ಮಗ ಮುಖ್ಯಮಂತ್ರಿ ಆಗ್ತಾರೆ, ಮೊಮ್ಮಗ ಎಂಪಿ ಆಗ್ತಾರೆ, ಪತ್ನಿ ಎಂಎಲ್ ಎ ಆಗ್ತಾರೆ. ಮತ್ತೊಬ್ಬ ಮಗ ಲೋಕೋಪಯೋಗಿ ಸಚಿವನಾಗುತ್ತಾರೆ. ಕೆಲವರಿಗೆ ಕುಟುಂಬವೇ ರಾಜಕಾರಣವಾದರೆ, ಮತ್ತೆ ಕೆಲವರಿಗೆ ರಾಜಕಾರಣವೇ ಕುಟುಂಬ ಹೀಗಾಗಿ ನಿಖಿಲ್ ಗೌಡರ ಮಂಡ್ಯ ಸ್ಪರ್ಧೆಗೆ ನಾವು ಅಚ್ಚರಿ ಪಡಲ್ಲ ಎಂದು ವ್ಯಂಗ್ಯವಾಡಿದ್ದಾರೆ.