ಮಂಗಳೂರು,ಮಾ.06(AZM):ಕಾಂಗ್ರೆಸ್ ಗೆ ಭಯೋತ್ಪಾದರಕರ ಚಿಂತೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ ಮಾತಿಗೆ ನಗರಾಭಿವೃದ್ಧಿ ಸಚಿವರಾದ ಯು.ಟಿ ಖಾದರ್ ರವರು ತಿರುಗೇಟು ನೀಡಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಯಡಿಯೂರಪ್ಪನವರಿಗೆ ಶ್ರೀನಿವಾಸ ಪೂಜಾರಿ ಯಾಕೆ ಹೆದರುತ್ತಾರೋ ಗೊತ್ತಿಲ್ಲ. ಶ್ರೀನಿವಾಸ ಪೂಜಾರಿಯವರು ಬಹಳ ಧೈರ್ಯವಂತರು ಎಂದು ಅದ್ಕೊಂಡಿದ್ದೆ. ಆದರೆ ಅವರು ಬಿಎಸ್ ವೈ ಅವರನ್ನು ಪ್ರಶ್ನಿಸುವ ಬದಲು ನನ್ನನ್ನು ಟೀಕಿಸುತ್ತಿದ್ದಾರೆ. ಸೇನೆ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಅದನ್ನು ರಾಜಕೀಯಕ್ಕೆ ಬಳಸಿದವರನ್ನು ಪ್ರಶ್ನಿಸಬೇಕಿತ್ತು ಎಂದು ಹೇಳಿದರು.
ಉಗ್ರಗಾಮಿ,ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುವ ಪಿಡಿಪಿ ಜೊತೆ ಯಾಕೆ ಬಿಜೆಪಿ ಅಧಿಕಾರ ನಡೆಸಿತ್ತು? ಎಂದು ಪ್ರಶ್ನಿಸಿದ ಸಚಿವ ಯು.ಟಿ. ಖಾದರ್, 300 ಕೆಜಿ ಆರ್ ಡಿ ಎಕ್ಸ್ ಕೊಂಡೊಯ್ಯುವಾಗ ಕೆಂದ್ರದ ಇಂಟಲಿಜೆನ್ಸ್ ಎಲ್ಲಿ ಹೋಗಿತ್ತು? ಇಲ್ಲಿ ಒಂದು ಲೋಡ್ ಮರಳು ಕೊಂಡೋಗುದಾದದರೂ ಕಷ್ಟಪಡಬೇಕು ಎಂದು ಹೇಳಿದರು.