ನವ ದೆಹಲಿ ನ2: ಅಡುಗೆ ಅನಿಲದ ಸಬ್ಸಿಡಿಯನ್ನು ಇನ್ನೊಮ್ಮೆ ಕಡಿತಗೊಳಿಸಿದ ಅನಿಲ ಕಂಪೆನಿಗಳು ಎಲ್.ಪಿ.ಜಿ ಸಿಲಿಂಡರೊಂದಕ್ಕೆ 4.50 ರುಪಾಯಿಗಳ ಹೆಚ್ಚಳ ಮಾಡಿದ್ದರೆ,ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರಿಗೆ ಏಕಾಏಕಿ 932 ರುಪಾಯಿಗಳ ಏರಿಕೆ ಮಾಡಿವೆ. ಬುಧವಾರದಿಂದ ಪರಿಶ್ಕೃತ ದರಗಳು ಜಾರಿಗೆ ಬಂದಿವೆ.
ಹೊಸ ದರ ಜಾರಿಗೆ ಬಂದ ಪ್ರಕಾರ ನವದೆಹಲಿಯಲ್ಲಿ ಇದೀಗ ಗ್ರಹಬಳಕೆಯ 14.2 ಕೆಜಿ ಸಿಲಿಂಡರಿಗೆ ರು. 495.69ಪಾವತಿಸಬೇಕಾಗಿದೆ. ಸಬ್ಸಿಡಿ ರಹಿತ ಸಿಲಿಂಡರಿನ ದರ 742 ರುಪಾಯಿಯಾಗಿ ನಿಗದಿಪಡಿಸಲಾಗಿದೆ. ವಾಣಿಜ್ಯ ಉಪಯೋಗಕ್ಕಾಗಿ ಇದೇ ಗ್ಯಾಸ್ ಸಿಲಿಂಡರಿಗೆ ಗ್ರಾಹಕರು ರು.1310.50 ಪಾವತಿಸಬೇಕಾಗಿದೆ.
ತೈಲ ಕಂಪೆನಿಗಳ ದರ ನಿರ್ಣಯ ಸಮಿತಿ ಪ್ರತಿ ತಿಂಗಳ ಒಂದನೇ ತಾರಿಕಿನಂದು ಅಂತರಾಶ್ಟ್ರೀಯ ದರ ವಿನಿಮಯವನ್ನು ಆಧಾರವಾಗಿಟ್ಟುಕೊಂಡು ಭಾರತದಲ್ಲಿ ಪೆಟ್ರೋಲಿಯಂ ಹಾಗೂ ಅಡುಗೆ ಅನಿಲದ ದರದಲ್ಲಿ ಬದಾಲಾವಣೆ ಮಾಡುತ್ತಿದೆ.