ಉಡುಪಿ, ಮಾ 06(SM):ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕುಂಕುಮ ಹಾಕಿದವರು ಭಯೋತ್ಪಾದಕರಂತೆ ಕಾಣುತ್ತಾರೆ. ಆದರೆ ಈ ಹಿಂದೆ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯನವರೇ ನಾಮ ಧರಿಸಿದ್ದನ್ನು ಕಂಡಿದ್ದೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯ ಮುನ್ನಾ ದಿನ ಸಿದ್ದರಾಮಯ್ಯನವರು ನಾಮ ಧರಿಸಿ ದೇವಸ್ಥಾನಕ್ಕೆ ಹೋಗ್ತಾರೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ಕೊಡುವಾಗ ಉದ್ದುದ್ದ ನಾಮ ಧರಿಸುತ್ತಾರೆ. ಬಿಜೆಪಿಗೆ ನಾಮ, ಖಾವಿ ಆಧ್ಯಾತ್ಮ ದ ಸಂಕೇತವಾಗಿದೆ.
ಆದರೆ ಸಿದ್ದರಾಮಯ್ಯ, ರಾಹುಲ್ ಗಾಂಧಿಗೆ ಈ ನಾಮ ಚುನಾವಣೆಗೆ ಮಾತ್ರವೇ ಸೀಮಿತವಾಗಿದೆ. ಕಾಂಗ್ರೆಸ್ ಗೆ ಚುನಾವಣೆ ಬಂದಾಗ ಮಾತ್ರ ನಾಮ, ಖಾವಿ, ದೇವಸ್ಥಾನಗಳ ನೆನಪಾಗುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.