ನವದೆಹಲಿ ನ2: ಭಾರತದಲ್ಲಿ ಮಹಿಳೆಯರಿಗೆ ಸುರಕ್ಷಿತವಾಗಿ ಜೀವನ ಸಾಗಿಸುವಂತಹ ವಾತಾವರಣವಿರುವ ರಾಜ್ಯಗಳ ಪಯ್ಕಿ ಗೋವಾ ಪ್ರಥಮ ಸ್ಥಾನ ಪಡೆದರೆ ,ಕೇರಳ ದ್ವಿತೀಯ ಸ್ಥಾನ ಪಡೆದಿದೆ.
ಗೋವಾ,ಕೇರಳ ನಂತರ ಮಿಜೋರಂ,ಸಿಕ್ಕಿಂ,ಮಣಿಪುರ ಕ್ರಮಾನುಸಾರವಾಗಿ ಮೂರು,ನಾಲ್ಕು ಹಾಗೂ ಐದನೇ ಸ್ಥಾನಗಳನ್ನು ಪಡೆದಿವೆ. ಪಟ್ಟಿಯಲ್ಲಿ ಬಿಹಾರ ಕೊನೆಯ ಸ್ಥಾನದಲ್ಲಿದ್ದರೆ ಜಾರ್ಖಂಡ್,ಉತ್ತರ ಪದೇಶ ಹಾಗೂ ಢೆಲ್ಲಿ ಬಿಹಾರಕ್ಕಿಂತ ತುಸು ಮುಂದಿವೆ.
ಕೇಂದ್ರದ ಮಹಿಳಾ ಹಾಗೂ ಶಿಶು ಕಲ್ಯಾಣ ಇಲಾಖೆಯು, ಪ್ಲ್ಯಾನ್ ಇಂಡಿಯಾ ಎಂಬ ಸಂಸ್ಥೆಯು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ಲ್ಯಾನ್ ಇಂಡಿಯಾ ಸಂಸ್ಥೆಯು ಜಿವಿಐ ಇಂಡೆಕ್ಸನ್ನು ಆಧಾರವಾಗಿಟ್ಟಿಕೊಂಡು ಮಹಿಳೆಯರ ಸುರಕ್ಷೆಯ ಕುರಿತು ವರದಿ ತಯಾರು ಮಾಡಿತ್ತು. ಭಾರತದ ಸರಾಸರಿ ಜಿವಿಐ ಇಂಡೆಕ್ಸ್ 0.5314 ಆಗಿದ್ದರೆ ಇದರಲ್ಲಿ ಗೋವಾ 0.656 ಹಾಗೂ ಕೇರಳ 0.634 ಜಿವಿಐ ಇಂಡೆಕ್ಸ್ ಒಳಗೊಂಡಿವೆ.
ಶಿಕ್ಷಣ,ಅರೋಗ್ಯ,ಬಡತನ,ಸುರಕ್ಷೆ, ಮೊದಲಾದ ಘಟಕಗಳನ್ನು ಮುಂದಿಟ್ಟುಕೊಂಡು ಜಿವಿಐ ತಯಾರಿಸಲಾಗುತ್ತಿದೆ. ಇದರಲ್ಲಿ ಮಹಿಳೆಯ ಆರೋಗ್ಯ ವಿಭಾಗದಲ್ಲಿ ಕೇರಳ ಮುಂದಿದ್ದರೆ , ಸುರಕ್ಷೆಯಲ್ಲಿ ಗೋವಾ ಮೊದಲ ಸ್ಥಾನ ಪಡೆದಿದೆ.