ಮಂಗಳೂರು, ಮಾ 07(SM): ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳಿಬ್ಬರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಗರದ ಬಳ್ಳಾಲ್ ಬಾಗ್ ಬಳಿ ನಡೆದಿದೆ. ಮುಹಮ್ಮದ್ ರಾಫಿ (19) ಹಾಗೂ ಶರಫುದ್ದೀನ್(19) ಹಲ್ಲೆಗೊಳಗಾದ ವಿದ್ಯಾರ್ಥಿಗಳು.
ಹಲ್ಲೆಗೊಳಗಾದವರು ನಗರದ ಖಾಸಗಿ ಕಾಲೇಜೊಂದರ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಾಗಿದ್ದಾರೆ. ಇವರ ಮೇಲೆ ಡ್ರಾಯಿಂಗ್ ಶೀಟ್ ಕದ್ದ ಆರೋಪ ಹೊರಿಸಿದ ತಂಡ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ.
ಆರೋಪಿಗಳ ತಂಡದಲ್ಲಿ ನಾಲ್ವರಿದ್ದರು ಎನ್ನಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳ ತಲೆ, ಸೊಂಟ ಹಾಗೂ ಮುಖದ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳು ವಿದ್ಯಾರ್ಥಿಗಳಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಯ ಕುರಿತಂತೆ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.