ಉಡುಪಿ ನ 2: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೆ.ಪಿ.ಎಂ.ಇ ಕಾಯ್ದೆಯ ತಿದ್ದುಪಡಿ ಯನ್ನು ವಿರೋಧಿಸಿ ನಗರದ ಎಲ್ಲಾ ವೈದ್ಯಕೀಯ ಸೇವೆಗಳನ್ನು ನಾಳೆ ನ 3 ರಂದು ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಶಾಖೆಯ ಅಧ್ಯಕ್ಷ ಡಾ| ರಾಘವೇಂದ್ರ ಭಟ್ ತಿಳಿಸಿದ್ದಾರೆ ಇದರೊಂದಿಗೆ ರಾಜ್ಯಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಎಲ್ಲಾ ಲ್ಯಾಬ್ಗಳು ತುರ್ತು ಸೇವೆ ಸೇರಿದಂತೆ ಎಲ್ಲ ವಿಧದ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಉಡುಪಿ ಜಿಲ್ಲೆಯಲ್ಲೂ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಜಿಲ್ಲಾ ಆಯುಷ್ ಅಧ್ಯಕ್ಷ ಡಾ| ಎನ್. ಟಿ ಅಂಚನ್ ಪಡುಬಿದ್ರಿ ತಿಳಿಸಿದ್ದಾರೆ. ನ. 3ರ ಬೆಳಿಗ್ಗೆ 6ರಿಂದ ಮರುದಿನ 6ಗಂಟೆ ವರೆಗೆ ಎಲ್ಲ ವಿಧದ ವೈದ್ಯಕೀಯ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಡಾ. ಅಂಚನ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸಾಧಿಸುವುದರ ಹಿಡಿತ ಸಾಧಿಸಿಸುವ ಮೊದಲು ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಲಿ ಎನ್ನುವುದು ವೈದ್ಯರ ವಾದವಾಗಿದೆ.