ಮಂಗಳೂರು,ಮಾ 08 (MSP): ಮಂಗಳೂರು ಪಾಲಿಕೆಯ ಐದು ವರ್ಷಗಳ (2014-15ರಿಂದ 2018-19) ಕಾಂಗ್ರೆಸ್ ಆಡಳಿತಾವಧಿಯೂ ಮಾ.07ರ ಗುರುವಾರ ಮುಗಿದಿದ್ದು, ಇಂದಿನಿಂದ ಅಂದರೆ ಮಾ. 8 ರಿಂದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಪಾಲಿಕೆಯಲ್ಲಿ ಹೊಸ ಆಡಳಿತ ಯಂತ್ರ ಅಧಿಕಾರಕ್ಕೆ ಬರುವ ತನಕ ಪಾಲಿಕೆಯ ಆಡಳಿತಾಧಿಕಾರಿಯಾಗಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮುಂದಿನವಾರದಿಂದ ನಿಗದಿತ ಸಮಯವನ್ನು ಪರಿಶೀಲಿಸಿ ಪಾಲಿಕೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆಯ ನಂತರ ಪಾಲಿಕೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.
ಮಾ. 11ರ ಬಳಿಕ ಪ್ರಸ್ತುತ ಕಾರ್ಪೊರೇಟರ್ಗಳು ಮಾಜಿ ಕಾರ್ಪೊರೇಟರ್ಗಳಾಗಲಿದ್ದಾರೆ. ವಿಶೇಷವೆಂದರೆ, ಆ ಸಂದರ್ಭದಲ್ಲಿಯೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಏನಾದರೂ ತುರ್ತು ಕಾರ್ಯಗಳು ನಡೆಸಬೇಕಿದ್ದರೆ ಆಡಳಿತಾಧಿಕಾರಿಯ ಗಮನಕ್ಕೆ ತಂದು ಒಪ್ಪಿಗೆ ಪಡೆದು ಮುಂದುವರಿಯಬೇಕಾಗುತ್ತದೆ.