ಕಲಬುರಗಿ ನ 2: ಇಲ್ಲಿನ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ 83 ವರ್ಷದ ಡಾ. ಶರಣಬಸಪ್ಪಅಪ್ಪಾ ಅವರು ಗಂಡುಮಗುವಿನ ತಂದೆಯಾಗಿದ್ದಾರೆ. ಇವರು ಶರಣ ಬಸವೇಶ್ವರ ವಿದ್ಯಾವರ್ಧಕ ಪೀಠಾಧಿಕಾರಿಯಾಗಿದ್ದು ಇದು ಅವರ ಒಂಬತ್ತನೇ ಮಗುವಾಗಿದೆ. ಇವರ 2ನೇ ಪತ್ನಿ 48 ವರ್ಷದ ದಾಕ್ಷಾಯಿಣಿ ಅವರು ಬುಧವಾರ ಮುಂಬೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗಾಗಿ ಪರಿತಪಿಸಿದ ಶರಣಬಸಪ್ಪ ಅಪ್ಪ ದಂಪತಿ ಇದೀಗ ಸಂಭ್ರಮ ಮನೆಮಾಡಿದೆ.
ಸುದ್ದಿ ತಿಳಿದ ತಕ್ಷಣ ಸುತ್ತ ಮುತ್ತ ಊರಿನ ಜನಜಂಗುಳಿಯೇ ಮಗುವನ್ನು ನೋಡಲೆಂದು ಮಠಕ್ಕೆ ದೌಡಾಯಿಸಿದಾಗ ಮಠದ ವಕ್ತಾರರು ಮಗು ಮುಂಬಯಿ ಆಸ್ಪತ್ರೆಯಲ್ಲಿರುವುದನ್ನು ತಿಳಿಸಿ ಜನರನ್ನು ಸಾಗಹಾಕಿದ್ದಾರೆ. ಇವರ ಮೊದಲ ಪತ್ನಿಗೂ 5 ಹೆಣ್ಣು ಮಕ್ಕಳಿದ್ದು ಇವರು ಅನಾರೋಗ್ಯದಿಂದ ಹಲವು ವರ್ಷದ ಹಿಂದೆಯೇ ನಿಧನರಾಗಿದ್ದಾರೆ. 2 ನೇಯ ಪತ್ನಿಗೆ ಮೂರು ಹೆಣ್ಣು ಮಕ್ಕಳಿದ್ದಾರೆ. ಶರಣಬಸಪ್ಪ ಅಪ್ಪಾ ಅವರು ನೂರಾರು ಕೋಟಿ ರೂಪಾಯಿ ಆಸ್ತಿಯ ಒಡೆಯರಾಗಿದ್ದು ಇದಕ್ಕೆಲ್ಲದಕ್ಕೂ ಉತ್ತರಾಧಿಕಾರಿಯಾಗಲು ಒಬ್ಬ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ.