c,ಮಾ 09(MSP): ಅಮೇರಿಕಾ,ಚೀನಾ,ರಷ್ಯಾದಂತೆ 2028ರ ವೇಳೆಗೆ ಅಗ್ರ ಮೂರು ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಭಾರತ ವಿರಾಜಿಸಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಅವರು ಮಾ.09 ರ ಶನಿವಾರ ನಗರದ ಟಿ.ಎಂ.ಎ.ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿರುವ ಚಿಂತಕರ ಸಮಾವೇಶದಲ್ಲಿ ಉದ್ಯಮಿಗಳು, ವೈದ್ಯರು, ಬುದ್ಧಿ ಜೀವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ 2025ಕ್ಕೆ ಸೂಪರ್ ಪವರ್ ಆಗಲಿದೆ. 2014ರಲ್ಲಿ 9ನೇ ಸ್ಥಾನದಲ್ಲಿ ಭಾರತದ ಆರ್ಥಿಕತೆ ಈಗ 6ನೇ ಸ್ಥಾನಕ್ಕೇರಿದೆ. ಕೆಲವೇ ದಿನಗಳಲ್ಲಿ 5ನೇ ಸ್ಥಾನ ಪಡೆಯಲಿದೆ. ಜಗತ್ತಿ ಬಲಿಷ್ಠ ರಾಷ್ಟ್ರಗಳಾಗಿರುವ ಅಮೆರಿಕ, ರಷ್ಯಾ, ಚೀನಾಗಳನ್ನು ಭಾರತ ಹಿಂದಿಕ್ಕಲಿದೆ. ಇಂದು ಭಾರತವು ಹೂಡಿಕೆದಾರರ ಅತೀ ಆಕರ್ಷಣೀಯ ದೇಶವಾಗಿದೆ. ವಿದೇಶಿಗರು ಭಾರತದಲ್ಲಿ ಬಂಡವಾಳ ಹೂಡುತ್ತಿದ್ದಾರೆ.ಅತ್ಯುತ್ಸಾಹ ತೋರುತ್ತಿದ್ದಾರೆ. ಭಾರತವನ್ನು ಸೂಪರ್ ಪವರ್ ಮಾಡುವುದು ನಮ್ಮ ಕನಸಲ್ಲ, ವಿಶ್ವಗುರು ಮಾಡುವುದು ನಮ್ಮ ಗುರಿಯಾಗಿದೆ. ಭಾರತವು ಧನ, ಬಲ, ಜ್ಞಾನದ ಮೂಲಕ ವಿಶ್ವಕ್ಕೆ ಗುರು ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ ಎಂದು ಹೇಳಿದರು.
ಭಾರತ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದೆ. ಉಗ್ರವಾದವನ್ನು ಮೆಟ್ಟಿ ನಿಲ್ಲಲು ಭಾರತ ಕಂಕಣಬದ್ಧವಾಗಿದ್ದು, ವಾಯು, ಭೂಮಿ, ಜಲ ಯಾವುದೇ ಮಾಧ್ಯಮವೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಉಗ್ರವಾದವನ್ನು ಶಮನಗೊಳಿಸುವ ಆತ್ಮ ವಿಶ್ವಾಸವಿದೆ ಭಾರತಕ್ಕಿದೆ ಎಂದು ತಿಳಿಸಿದರು. ಆದರೆ ಇದ್ಯಾವುದನ್ನು ಸಹಿಸದ ವಿಪಕ್ಷಗಳು ಬಿಜೆಪಿಯೂ ಧರ್ಮ ವಿಭಜಿಸುತ್ತದೆ ಎಂದು ಸಂಸತ್ ನಲ್ಲೂ ಗದ್ದಲವೆಬ್ಬಿಸಿತ್ತು. ಆದರೆ ಬಿಜೆಪಿ ಎಲ್ಲರಿಗೂ ಸಮಾನ ನ್ಯಾಯ ನೀಡಿದೆ. ನಾವು ಯಾರನ್ನೂ ತುಷ್ಟೀಕರಣ ಮಾಡಿಲ್ಲ. ದೆಹಲಿಯಲ್ಲಿ ಹತ್ತು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು.ತಕ್ಷಣ ಕುಟುಂಬಿಕರ ಮೊರೆಗೆ ನಾನು ಸ್ಪಂದಿಸಿ ಅವರ ವಿಚಾರಣೆ ನಡೆಸಿ ಏಳು ಮಂದಿ ಬಿಡುಗಡೆ ಮಾಡಿದ್ದೇವು.ಯಾಕೆಂದರೆ ನಾವು ಧರ್ಮದ ರಾಜಕಾರಣ ಮಾಡುವುದಿಲ್ಲ. ನಮ್ಮದೇನಿದ್ದರೂ ನ್ಯಾಯಿಕ ಮತ್ತು ಮಾನವೀಯತೆ ರಾಜಕಾರಣ ಕಾಶ್ಮೀರದ ವಿದ್ಯಾರ್ಥಿಗಳು ನಮ್ಮ ಮಕ್ಕಳು.ಕಾಶ್ಮೀರದ ವಿದ್ಯಾರ್ಥಿಗಳ ಜೊತೆ ಎಂದೂ ಗಲಾಟೆ ಮಾಡಬೇಡಿ.ಕಾಶ್ಮೀರ ನಮ್ಮದು, ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ನಿಲ್ಲಬೇಕಿದೆ. ಸರ್ಕಾರವು ಕಾಶ್ಮೀರದ ವಿದ್ಯಾರ್ಥಿ ಪೂರ್ಣ ಸುರಕ್ಷೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ , ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.