ಕುಂದಾಪುರ,ಮಾ.09(AZM):ಕುಂದಾಪುರ ತಾಲೂಕಿನ ಕಟಬೆಳ್ತೂರು ಗ್ರಾಮದಲ್ಲಿ 60 ಮದ್ಯದ ಬಾಟಲಿಗಳೊಂದಿಗೆ ಸಿಕ್ಕಿಬಿದ್ದಿದ್ದ ಆರೋಪಿಯನ್ನು ಉಡುಪಿ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ.
ಉಡುಪಿಯ ಅಬಕಾರಿ ಹಾಗೂ ಲಾಟರಿ ನಿಷೇಧ ದಳ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದ ಹೆಮ್ಮಾಡಿಯ ಜೇಮ್ಸ್ ರೆಬೇರೋ ಎಂಬವರನ್ನು ಉಡುಪಿಯ ನ್ಯಾಯಲಯ ಇಂದು ದೋಷಮುಕ್ತಿಗೊಳಿಸಿದೆ.
ಉಡುಪಿಯ ನ್ಯಾಯಲಯದಲ್ಲಿ 5 ಸಾಕ್ಷಿದಾರರ ವಿಚಾರಣೆ ನಡೆದಿತ್ತು. ಕರ್ನಾಟಕ ಉಚ್ಚ ನ್ಯಾಯಲಯದ ತೀರ್ಪಿನಂತೆ ಸ್ವಾಧೀನಪಡಿಸಿಕೊಂಡ ಎಲ್ಲಾ ಮದ್ಯದ ಬಾಟಲಿಗಳಿಂದ ಮದ್ಯವನ್ನು ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಬೇಕಾಗಿದ್ದಾರೂ, ಕೇವಲ 8 ಬಾಟಲಿನಿಂದ ಮದ್ಯವನ್ನು ಹಾಗೆ ಕಳುಹಿಸಿ ಮದ್ಯವೆಂದು ದೃಢೀಕರಣವನ್ನು ಪಡೆಯಲಾಗಿತ್ತು.
2,3 ಲೀಟರ್ ಮದ್ಯವನ್ನು ವ್ಯಕ್ತಿಯೋರ್ವ ಸ್ವಾದೀನ ಹೊಂದಿರಲು ಕಾನೂನಿನಲ್ಲಿ ಅವಕಾಶವಿದ್ದು, ಕರ್ನಾಟಕ ಅಬಕಾರಿ ಕಾಯಿದೆಯ ಕಲಂ 32 ಹಾಗೂ 34ರ ಕೆಳಗೆ ದಾಖಲಾದ ಪ್ರಕರಣದಲ್ಲಿ ಉಡುಪಿಯ ನ್ಯಾಯಧೀಶರಾದ ಇರ್ಫಾನ್ರವರು ಆರೋಪಿಯನ್ನು ದೋಷಮುಕ್ತಿಗೊಳಿಸಿದ್ದಾರೆ.