ಮಂಗಳೂರು,ಮಾ.10(AZM):ಐದು ವರುಷದಲ್ಲಿ ಮೂರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎನ್ನುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಮಾಜೀ ಸಿಎಂ ಸಿದ್ಧರಾಮಯ್ಯನವರು ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,ಸರ್ಜಿಕಲ್ ಸ್ಟ್ರೈಕ್ ನ ರಾಜಕೀಯ ಲಾಭ ಪಡೆಯಬಾರದು. ಈ ಹಿಂದೆಯೂ ಕೂಡಾ ಪಾಕಿಸ್ತಾನ ವಿರುದ್ಧ ಯುದ್ಧವಾಗಿದ್ದು, ಇಂದಿರಾಗಾಂಧಿ ಕಾಲದಿಂದಲೂ ಪಾಕಿಸ್ತಾನವನ್ನು ಸೋಲಿಸಲಾಗಿತ್ತು. ಹಾಗೂ ಬಾಂಗ್ಲಾ ದೇಶಕ್ಕೆ ಸ್ವಾತಂತ್ರ್ಯ ಕೂಡಾ ಒದಗಿಸಲಾಗಿತ್ತು ಎಂದು ಹೇಳಿದರು.
ಮಾ.೦೯ರಂದು ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವರಾದ ರಾಜ್ ನಾಥ್ ಸಿಂಗ್ ಐದು ವರುಷದಲ್ಲಿ ಮೂರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ ಎಂದು ಹೇಳಿಕೆ ನೀಡಿದ್ದರು.