ನ 2: ಭೂತಾನ್ ದೇಶದ ದೊರೆ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ಚುಕ್ ಐದು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ. ಆದರೆ ಭೂತಾನ್ ದೊರೆಗಿಂತಲೂ ಭಾರತದಲ್ಲಿ ದೊರೆ ಮಗನೇ ಹೆಚ್ಚು ಚರ್ಚೆಯಲ್ಲಿದ್ದಾನೆ. ಕಾರಣ ಮುದ್ದು ಮುದ್ದಾದ ಈತನನ್ನು ಪ್ರಧಾನಿ ನರೇಂದ್ರ ಮೋದಿಯೇ ಮುದ್ದು ಮಾಡಿರುವುದು. ಸದ್ಯ ಈ ಫೋಟೋಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮೋದಿ ಈ ಪುಟ್ಟ ರಾಜನಿಗೆ ಫಿಫಾ ಅಂಡರ್ 17 ಪುಟ್ಬಾಲ್ ಮತ್ತು ಚೆಸ್ ಬೋರ್ಡ್ ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ಪುಟಾಣಿ ದೊರೆಗೆ ಪ್ರಧಾನಿಯಷ್ಟೇ ಅಲ್ಲದೇ ಸುಷ್ಮ ಸ್ವರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ಮನಸೋತಿದ್ದಾರೆ. ಭಾರತ-ಭೂತಾನ್ ಭದ್ರತೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದಾಗ ಪುಟಾಣಿ ಅರಸು ಮತ್ತು ಪ್ರಧಾನಿ ಪರಸ್ಪರ ನಮಸ್ಕಾರ ವಿನಿಮಯ ಮಾಡಿಕೊಂಡರು.