ಮಂಗಳೂರು, ಮಾ 11 (MSP): ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಷ್ಟ ಬಂಧ ಹಾಗೂ ನೂತನ ಧ್ವಜಪ್ರತಿಷ್ಠಾ ಸಂದರ್ಭ ಪವಾಡವೊಂದು ನಡೆದಿದ್ದು, ನೆರೆದಿದ್ದ ಭಕ್ತಸಮೂಹ ಈ ಅಚ್ಚರಿಯನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.
ಭಾನುವಾರ ಬೆಳಗ್ಗೆ 10.40ಕ್ಕೆ ನಡೆದ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ ನಡೆದು ಧ್ವಜಸ್ತಂಭಕ್ಕೆ ಚಿನ್ನಲೇಪಿತ ನವಿಲಿನ ಮೂರ್ತಿಯನ್ನು ಮೇಲಕ್ಕೇರಿಸಿ ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಿ ನವಿಲು ಧ್ವಜ ಏರಿಸಲಾಯಿತು.
ಈ ವೇಳೆ ಅಚಾನಕ್ಕಾಗಿ ಪ್ರತ್ಯಕ್ಷವಾದ ಮೂರು ಗಿಡುಗಗಳು ದೇವಸ್ಥಾನದ ಮೇಲ್ಭಾಗದಿಂದ ಕೊಡಿಮರಕ್ಕೆ ಪ್ರದಕ್ಷಿಣೆ ಹಾಕಿದೆ. ಇದನ್ನು ಕಂಡು ನೆರೆದಿದ್ದ ಸಾವಿರಾರು ಭಕ್ತಸಮೂಹ ಪುಳಕಿತರಾದರು. ಮೂರು ಬಾರಿ ಪ್ರದಕ್ಷಿಣೆ ಹಾಕಿದ ಗರುಡಗಳು ಅನಂತರ ಕಾಣದಾಗಿದ್ದು ಅಚ್ಚರಿಗೆ ಕಾರಣವಾಗಿದೆ.
ಪೊಳಲಿ ದೇವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು ಕಾರಣಿಕದ ಕ್ಷೇತ್ರವಾಗಿದೆ.ಭಾನುವಾರ ಶ್ರೀ ರಾಜರಾಜೇಶ್ವರಿ ಪ್ರತಿಷ್ಠಾ ಅಷ್ಠಬಂಧ ನಡೆದಿದ್ದು, ಭಕ್ತರು ಶ್ರೀ ದೇವಿಯ ಮೃಣ್ಮಯ ಮೂರ್ತಿಯ ದರ್ಶನ ಪಡೆದರು.