ಮಂಗಳೂರು ನ 2: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜೆಪ್ಪು-ಬಪ್ಪಾಲ್ ವ್ಯಾಪ್ತಿಯಲ್ಲಿ ಓಡಾಡೋ ಜನರ ಒಂದು ಕೈ ಮೂಗಿನ ಮೇಲಿರುತ್ತೆ ಯಾಕೆ ಗೊತ್ತಾ.. ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ಓಡಾಡೋದಲ್ಲ ..ವಾಸನೆಯಿಂದ ಮೂಗನ್ನು ಒತ್ತಿ ಹಿಡಿದುಕೊಂಡು ಓಡಾಡೋದು. ಇನ್ನು ಇಲ್ಲಿರುವ ಸ್ಥಳೀಯ ನಿವಾಸಿಗಳು ಅಲ್ಲಿ ಹೇಗೆ ಕಾಲ ಕಳೆಯುತ್ತಾರೋ ದೇವರೇ ಬಲ್ಲ ... ಕಾರಣ ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದು. ಚರಂಡಿಗಳಿಂದ ಬರುತ್ತಿರುವ ಗಬ್ಬು ನಾಥ ಒಂದೆಡೆಯಾದರೆ, ಒಳಚರಂಡಿಯಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ವಿವಿಧ ರೋಗಗಳ ಕಾಟ . ಇಲ್ಲಿ ಬದುಕುವುದು ಕಷ್ಟವಾಗುತ್ತಿದೆ ಎಂದು ಸ್ಥಳೀಯ ಕಾರ್ಪೋರೇಟರ್ ಅಪ್ಪಿಗೆ ದೂರು ನೀಡಿದರೆ ಅವರಿಂದ ಸಿಗುವುದು ಉಡಾಫೆ ಉತ್ತರ ಎಂದು ಸ್ಥಳೀಯರ ಅಳಲು. ನಿತ್ಯವೂ ಡ್ರೈನೇಜ್ ನೀರು ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ. ತೆರೆದ ಒಳಚರಂಡಿ ಇದ್ದ ಕಾರಣ ಚರಂಡಿ ಅಕ್ಕ ಪಕ್ಕದವರ ಮನೆಯ ಸದಸ್ಯರ ಬದುಕು ಕೂಡಾ ಗಬ್ಬೆದ್ದು ಹೋಗಿದೆ ಎನ್ನುವುದು ಸ್ಥಳೀಯರ ಗೋಳು ."ಒಂದು ವೇಳೆ ಪಾಲಿಕೆ ಸದಸ್ಯ ಅಪ್ಪಿಯವರಿಗೆ ತಮ್ಮ ವಾರ್ಡ್ ನ್ನು ಸಮರ್ಪಕ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಲಿ . ನಾವು ತೆರಿಗೆ ಕಟ್ಟಿ ಮಂಗಳೂರಿನ ನಾಗರಿಕರ ಜವಾಬ್ದಾರಿ ಮಾಡಿದ್ದೇವೆ. ಈಗ ಕಾರ್ಪೋರೇಟರ್ ಅವರು ತಮ್ಮ ಕರ್ತವ್ಯ ಮಾಡಲಿ" ಎಂದು ಆಕ್ರೋಶ ವ್ಯಕ್ತಪದಿಸುತ್ತಿದ್ದಾರೆ ಇಲ್ಲಿನ ಸ್ಥಳೀಯ ನಿವಾಸಿ ಭರತ್