ಬಂಟ್ವಾಳ, ಮಾ 11 (MSP): ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೃತ್ಯ ಮಾಡುತ್ತಿರುವುದನ್ನು ಕಂಡು ಸಹಿಸಲಾರದ ವಿದ್ಯಾರ್ಥಿಯೊಬ್ಬ, ವಿದ್ಯಾರ್ಥಿನಿಯರ ನೃತ್ಯವನ್ನು ಅರ್ಧಕ್ಕೆ ನಿಲ್ಲಿಸಿ ಕೋಮುಭಾವನೆ ವ್ಯಕ್ತಪಡಿಸಿದ ಘಟನೆ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ.
ಬಂಟ್ವಾಳದ ಸಿದ್ಧಕಟ್ಟೆ ಸರಕಾರಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಜೊತೆಯಾಗಿ ನೃತ್ಯ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ಆದರೆ ಎಲ್ಲಾ ಧರ್ಮದವರು ಒಗ್ಗಟ್ಟಾಗಿ ಭಜರಂಗಿ ಹಾಡಿಗೆ ನೃತ್ಯವನ್ನು ಮಾಡುತ್ತಿದ್ದಾಗಲೇ ಅದೇ ಕಾಲೇಜಿನ ವಿದ್ಯಾರ್ಥಿ ರವೂಫ್ ಎಂಬಾತ ನೃತ್ಯದ ನಡುವೆ ಬಂದು ವಿದ್ಯಾರ್ಥಿನಿಯರು ಕುಣಿಯದಂತೆ ಅಡ್ಡಿ ಪಡಿಸಿದ್ದಾನೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಈತನ ಕೋಮು ಮನಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರೂ ಸೇರಿ ಆತನನ್ನು ವೇದಿಕೆಯಿಂದ ಹೊರಕ್ಕೆ ದಬ್ಬಿ ಮತ್ತೆ ನೃತ್ಯವನ್ನು ಮುಂದುವರಿಸಿದರು.