ಕೋಟ, ಮಾ 12 (MSP): ಕಳೆದ ಹಲವು ದಿನಗಳ ಹಿಂದೆ ತೆಕ್ಕಟ್ಟೆ ಕೆದೂರಿನ ಸ್ಪೂರ್ತಿಧಾಮದಿಂದ ದತ್ತು ಪಡೆಯಲಾಗಿದೆ ಎನ್ನಲಾದ 10 ವರ್ಷದ ಪ್ರಾಯದ ಬಾಲಕಿಯನ್ನು ಕುಪ್ಪೆಪದವು ನಿವಾಸಿಯೊರ್ವರು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸವಿದೆ ಎಂದು ತಿಳಿದು ವಾಪಾಸ್ ಸ್ಪೂರ್ತಿಧಾಮಕ್ಕೆ ಬಿಟ್ಟ ಘಟನೆ ಮಾ.12 ರ ಸೋಮವಾರ ನಡೆದಿದೆ.
ಆದರೆ ಆ ಮಗು ಸ್ಪೂರ್ತಿ ಧಾಮಕ್ಕೆ ಬಿಟ್ಟ ಮರುಘಳಿಗೆಯಲ್ಲಿ ದತ್ತು ಪಡೆದವರನ್ನು ಹಿಂಬಾಲಿಸಿಕೊಂಡು ಹೋಗಿದೆ ಆದರೆ ಅವರ ಗಮನಕ್ಕೆ ಬಾರದ ಹಿನ್ನಲೆ ಮಗು ತೆಕ್ಕಟ್ಟೆಯಿಂದ ಸಾಸ್ತಾನದವರೆಗೆ ನಡಿಗೆಯ ಮೂಲಕ ಬಂದ್ದದನ್ನು ಕಂಡ ಸಾಸ್ತಾನದ ಸ್ಥಳೀಯರು ತಡೆ ಹಿಡಿದು ರಕ್ಷಿಸಿ ಪೊಲೀಸ್ ಇಲಾಖೆಗೆ ಒಪ್ಪಿಸಿದ್ದು ನಂತರ ಉಡುಪಿಯ ನಿಟ್ಟೂರಿನ ಸಿ.ಡಬ್ಲ್ಯು ಸಿ ಗೆ ಹಸ್ತಾಂತರಿಸಲಾಗಿದೆ.